ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.8.1ಕ್ಕೇರಿದ ಹಣದುಬ್ಬರ; ಪರಿಣಾಮ ಬೀರದ ಕ್ರಮಗಳು  Search similar articles
ಭಾರತೀಯ ಹಣಕಾಸು ಮಾರುಕಟ್ಟೆಯಲ್ಲಿ ಹಣದುಬ್ಬರದ ಪ್ರಮಾಣವು ಶೇ 8ನ್ನು ಈ ವಾರದ ಅವಧಿಯಲ್ಲಿ ತಲುಪಿದ್ದು. ಮೇ 29ಕ್ಕೆ ಕೊನೆಗೊಂಡ ವಾರದ ಅವಧಿಯ ಸಗಟು ಸೂಚ್ಯಂಕ ದರ ಪ್ರಕಾರ ಶೇ.8.1ಕ್ಕೇರಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಹಣಕಾಸು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಮೇ 17ಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರದ ಪ್ರಮಾಣವು ಸಗಟು ದರ ಸೂಚ್ಯಂಕ ಮಾರುಕಟ್ಟೆಯಲ್ಲಿ ಶೇ 7.82 ದಾಖಲಾಗಿತ್ತು. ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರದ ಪ್ರಮಾಣವು 44 ತಿಂಗಳ ಹಿಂದಿನ ಪ್ರಮಾಣವನ್ನು ತಲುಪಿದ್ದು, ಮೇ 3ರಂದು ಹಣದುಬ್ಬರದ ಎರಿಕೆಯು ಶೇ 7.83 ಇತ್ತು ಎಂದು ಆರ್‌ಬಿಐ ಹೇಳಿದೆ.

ಎರುಗತಿಯಲ್ಲಿ ಸಾಗುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲ ನೀತಿ ಮತ್ತು ಠೇವಣಿಗಳ ಮೇಲಿನ ಬಡ್ಡಿದರಗಳ ಮೇಲಿನ ನೀತಿಯನ್ನು ಪರಾಮರ್ಶಿಸಲು ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಕೇಂದ್ರೀಯ ಬ್ಯಾಂಕ್ ಪ್ರಕಾರ ಹಣದುಬ್ಬರವು ಶೇ 5.5ನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಮೀರುವಂತಿಲ್ಲ. ಕಳೆದ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೀಸಲು ನಗದು ನೀತಿಯನ್ನು ಎರಡು ಹಂತಗಳಲ್ಲಿ ಪರಿಷ್ಕರಿಸಿದ್ದು ಮೊದಲು 7.25ರಷ್ಟಿದ್ದ ಮೀಸಲು ನಗದು ಪ್ರಮಾಣವನ್ನು 8.25ಕ್ಕೆ ಏರಿಕೆ ಮಾಡಲಾಗಿದೆ.
ಮತ್ತಷ್ಟು
ಕಚ್ಚಾ ತೈಲದ ಬೆಲೆಯಲ್ಲಿ 4 ಡಾಲರ್ ಇಳಿಕೆ
'ಅಧಿಕ ಬಡ್ಡಿದರ ಏರಿಕೆ ಸೂಕ್ತವಲ್ಲ'
ತೈಲ ಬೆಲೆ ಏರಿಕೆ ನಿರ್ಧಾರ ಮೇ.31ರೊಳಗೆ
ವಿಡೀಯೊಕಾನ್:60 ಬಿನ್‌ ವೆಚ್ಚದಲ್ಲಿ ವಿದ್ಯುತ್ ಯೋಜನೆ
ಅನಿಲ ಸೋರಿಕೆ: ಇಬ್ಬರು ಅಧಿಕಾರಿಗಳ ಬಂಧನ
ಏರ್‌ ಲೈನ್ಸ್‌ಗಳಿಂದ ಇ-ಟಿಕೆಟ್ ಜಾರಿ