ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ನಿಯಂತ್ರಣಕ್ಕೆ ಐಎಂಎಫ್ ಎಚ್ಚರಿಕೆ  Search similar articles
ಭಾರತದಂತೆ ಉದಯೋನ್ಮುಖ ಮಾರುಕಟ್ಟೆ ಹೊಂದಿರುವ ದೇಶಗಳು ಹೆಚ್ಚುತ್ತಿರುವ ಕಚ್ಚಾ ತೈಲ ಹಾಗೂ ಅಹಾರಧಾನ್ಯಗಳ ಬೆಲೆಗಳ ನಿಯಂತ್ರಣಕ್ಕೆ ಶ್ರೀಘ್ರದಲ್ಲಿ ಸೂಕ್ತ ಕ್ರಮ ತೆಗೆದುಕೊಂಡು ಹಣದುಬ್ಬರ ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಕೆ ನೀಡಿದೆ.

ಕಚ್ಚಾ ತೈಲ ದರದಲ್ಲಿ ಹೆಚ್ಚಳವಾಗುವುದರಿಂದ ಆರ್ಥಿಕ ಉದಯೋನ್ಮುಖ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಕೊರತೆ ಎದುರಾಗಲಿದೆ ಎಂದು ಬಹುರಾಷ್ಟ್ರೀಯ ವ್ಯಾಪಾರಿ ಸಂಸ್ಥೆಗಳು ತಿಳಿಸಿವೆ.

ಇಂಧನ ಹಾಗೂ ಅಹಾರಧಾನ್ಯಗಳ ದರಗಳಲ್ಲಿ ಹೆಚ್ಚಳವಾಗುವುದರಿಂದ ಉಂಟಾಗುವ ಹಣದುಬ್ಬರ ದೇಶದ ಆರ್ಥಿಕಾಭಿವೃದ್ಧಿಗೆ ಸಂಕಷ್ಟವನ್ನು ತರಲಿದೆ ಎಂದು ಐಎಂಎಫ್ ಮುಖ್ಯಸ್ಥ ಸಿಮೊನ್ ಜಾನ್ಸನ್ ತಿಳಿಸಿದ್ದಾರೆ.

ಉದಯೋನ್ಮುಖ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಜಾಗತಿಕ ಮಾರುಕಟ್ಟೆಯಲ್ಲಿ ಅಭಿವೃದ್ಧಿಯನ್ನು ಸಾಧಿಸಿವೆ. ಇಂತಹ ರಾಷ್ಟ್ರಗಳಲ್ಲಿ ಹಣದುಬ್ಬರ ಹೆಚ್ಚಾದಲ್ಲಿ ಹಣಕಾಸು ಇಲಾಖೆಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು
ಅಭಿವೃದ್ಧಿ ದರದಲ್ಲಿ ಶೇ 2.8ರಷ್ಟು ಇಳಿಕೆ
ಆಹಾರ ಕೊರತೆ ಭಾರತಕ್ಕೆ ಕಾಡದು
ಅಂಚೆ ಇಲಾಖೆಯ ಮೂಲಕ ಗೃಹಸಾಲ ವಿತರಣೆ
ಕೈಗಾರಿಕೆಗೆ ತೆರಿಗೆ ವಿನಾಯಿತಿ ಚಿದಂಬರಂ ವಿರೋಧ
ಶೇ.8.1ಕ್ಕೇರಿದ ಹಣದುಬ್ಬರ; ಪರಿಣಾಮ ಬೀರದ ಕ್ರಮಗಳು
ಕಚ್ಚಾ ತೈಲದ ಬೆಲೆಯಲ್ಲಿ 4 ಡಾಲರ್ ಇಳಿಕೆ