ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಧನ ದರ ಹೆಚ್ಚಳದಿಂದ ಸಾಗಾಣಿಕೆ ದರದಲ್ಲೂ ಹೆಚ್ಚಳ  Search similar articles
ನವದೆಹಲಿ :ವೈಮಾನಿಕ ಇಂಧನ ದರ ಹೆಚ್ಚಳದಿಂದಾಗಿ ಇಂಧನ ತೆರಿಗೆ ಸೇರಿದಂತೆ ಸರಕು ಸಾಗಾಣಿಕೆ ದರಗಳಲ್ಲಿ ಹೆಚ್ಚಳವಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ದರ ಹೆಚ್ಚಳವನ್ನು ಪ್ರಕಟಿಸಲಾಗಿದ್ದು, ದೇಶಿಯ ಕ್ಷೇತ್ರದಲ್ಲಿ ಶೇ 6ರಷ್ಟು ಹೆಚ್ಚಳವಾಗಿದ್ದು,ಏಷಿಯಾ ವಲಯದಲ್ಲಿ ಶೇ 2ರಷ್ಟು, ಅಮೆರಿಕ ಸಾಗಣಿಕೆ ದರಗಳಲ್ಲಿ ಶೇ 32ರಷ್ಟು ಹೆಚ್ಚಳವಾಗಿದೆ ಎಂದು ಅಮೆರಿಕನ್ ಎಕ್ಸ್‌ಪ್ರೆಸ್ ಪ್ರಕಟಿಸಿದೆ.

ತ್ರೈಮಾಸಿಕ ದಿಂದ ತ್ರೈಮಾಸಿಕದವರೆಗೆ ಹೋಲಿಕೆ ಮಾಡಿದಲ್ಲಿ ರಿಯಾಯಿತಿ ಎಕಾನಮಿ ದರಗಳಲ್ಲಿ ತಾತ್ಕಾಲಿಕವಾಗಿ ಶೇ 11ರಷ್ಟು ಇಳಿಕೆಯಾಗಿದೆ ಎಂದು ಅಮೆರಿಕನ್ ಎಕ್ಸ್‌ಪ್ರೆಸ್ ಏಷಿಯಾ ಫೆಸಿಫಿಕ್ ಬಿಸಿನೆಸ್ ಟ್ರಾವೆಲ್ ಮಾನಿಟರ್ ತಿಳಿಸಿದೆ.

ಏಷಿಯಾ ಫೆಸಿಫಿಕ್‌ನಿಂದ ಅಮೆರಿಕ ಹಾಗೂ ಮಧ್ಯ ಏಷಿಯಾ ಫೆಸಿಫಿಕ್ ರಾಷ್ಟ್ರಗಳಿಗೆ ತೆರಳುವ ಮಾರ್ಗಗಳ ವಿಮಾನ ಇಂಧನ ದರದಲ್ಲಿ ಕೂಡಾ ಭಾರಿ ಹೆಚ್ಚಳವಾಗಿದೆ ಪ್ರಮುಖ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ಮತ್ತಷ್ಟು
ಅಭಿವೃದ್ಧಿ ದರದಲ್ಲಿ ಶೇ 2.8ರಷ್ಟು ಇಳಿಕೆ
ಆಹಾರ ಕೊರತೆ ಭಾರತಕ್ಕೆ ಕಾಡದು
ಅಂಚೆ ಇಲಾಖೆಯ ಮೂಲಕ ಗೃಹಸಾಲ ವಿತರಣೆ
ಕೈಗಾರಿಕೆಗೆ ತೆರಿಗೆ ವಿನಾಯಿತಿ ಚಿದಂಬರಂ ವಿರೋಧ
ಶೇ.8.1ಕ್ಕೇರಿದ ಹಣದುಬ್ಬರ; ಪರಿಣಾಮ ಬೀರದ ಕ್ರಮಗಳು
ಕಚ್ಚಾ ತೈಲದ ಬೆಲೆಯಲ್ಲಿ 4 ಡಾಲರ್ ಇಳಿಕೆ