ಬೆಂಗಳೂರು :ವಿಪ್ರೋ ಸಂಸ್ಥೆಯ ಉದ್ಯೋಗಿಗಳಿಗೆ ದೈಹಿಕ ಹಾಗೂ ಮಾನಸಿಕತೆಯನ್ನು ಸದೃಡಗೊಳಿಸಲು ಫಿಟ್ ಫಾರ್ ಲೈಫ್ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ವಿಪ್ರೋ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯಕಾರಿ ನಿರ್ದೇಶಕ ಗೀರಿಶ್ ಪರಾಂಜಪೆ ಉದ್ಯೋಗಿಗಳು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿರುವುದು ನಮಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಫಿಟ್ ಫಾರ್ ಲೈಫ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವಿಪ್ರೋ ಸಂಸ್ಥೆಯ ಕಚೇರಿಗಳಲ್ಲಿ ಆರೋಗ್ಯ ಶಿಬಿರ, ಆರೋಗ್ಯಯುತವಾದ ಚಟಗಳು ಧೂಮಪಾನ ಜಾಗೃತಿ ಕಾರ್ಯಕ್ರಮ ಒತ್ತಡ ನಿವಾರಣೆ, ಮೆಡಿಟೇಶನ್ ಮತ್ತು ಯೋಗಾ ಸೇರಿದಂತೆ ಅಲರ್ಜಿ, ಮಧ್ಯಪಾನ, ತಲೆನೋವು ಸೇರಿದಂತೆ ಇನ್ನಿತರ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಜಾಗತಿಕ ಖ್ಯಾತಿಯ 32 ಕಂಪೆನಿಗಳು ಅನೇಕ ಆರೋಗ್ಯಕರ ಕಾರ್ಯಕ್ರಮಗಳನ್ನು ಎರ್ಪಡಿಸುವುದಲ್ಲದೇ ಉದ್ಯೋಗಿಗಳಿಗೆ ಆಕರ್ಷಕ ಕಚೇರಿ , ಉದ್ಯೋಗವಕಾಶ ಸೇರಿದಂತೆ ಉದ್ಯೋಗಿಗಳ ಓಲೈಕೆಯಲ್ಲಿ ತೊಡಗಿವೆ.
|