ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದರ ಹೆಚ್ಚಿಸದಿರಲು ಕೈಗಾರಿಕೆಗಳಿಗೆ ಸೂಚನೆ  Search similar articles
ನವದೆಹಲಿ :ಕಚ್ಚಾ ತೈಲಗಳ ದರ ಏರಿಕೆಯಿಂದಾಗಿ ಹಣದುಬ್ಬರ ಶೇ8 ರ ಗಡಿದಾಟಿದ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಉತ್ಪನ್ನಗಳ ದರವನ್ನು ಹೆಚ್ಚಿಸದೆ, ಪೂರೈಕೆ ಹಾಗೂ ಸರಬರಾಜುವಿನಲ್ಲಿ ಹಂದಾಣಿಕೆ ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.

ಕೈಗಾರಿಕೆಗಳು ಸಾಧ್ಯವಾದಷ್ಟು ದರವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಉತ್ಪಾದನೆ ವೆಚ್ಚ ಹೆಚ್ಚಾದಂತೆ ಮಾರುಕಟ್ಟೆಯ ದರವು ಹೆಚ್ಚಾಗುತ್ತದೆ. ಆದರೆ ಕೈಗಾರಿಕೆಗಳು ಆದಷ್ಟು ದರವನ್ನು ಹಿಡಿತದಲ್ಲಿಡಲು ಪ್ರಯತ್ನಿಸಬೇಕು ಎಂದು ಅಸೋಚಾಮ್ ಆಯೋಜಿಸಿದ ಸಭೆಯಲ್ಲಿ ಪಿ.ಚಿದಂಬರಂ ತಿಳಿಸಿದ್ದಾರೆ.

ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 130 ಡಾಲರ್‌ಗಳಿಗೆ ತಲುಪಿದ್ದರಿಂದ ವಿಶೇಷವಾಗಿ ಅಹಾರ ಧಾನ್ಯಗಳ ದರಗಳಲ್ಲಿ ಏರಿಕೆಯಾಗಿದ್ದು ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಭಾರತೀಯರು ಒಂದಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಮತ್ತಷ್ಟು
ವಿಪ್ರೋದಿಂದ ಫಿಟ್‌ ಫಾರ್ ಲೈಫ್ ಪ್ರಾರಂಭ
ಇಂಧನ ದರ ಹೆಚ್ಚಳದಿಂದ ಸಾಗಾಣಿಕೆ ದರದಲ್ಲೂ ಹೆಚ್ಚಳ
ಹಣದುಬ್ಬರ ನಿಯಂತ್ರಣಕ್ಕೆ ಐಎಂಎಫ್ ಎಚ್ಚರಿಕೆ
ಅಭಿವೃದ್ಧಿ ದರದಲ್ಲಿ ಶೇ 2.8ರಷ್ಟು ಇಳಿಕೆ
ಆಹಾರ ಕೊರತೆ ಭಾರತಕ್ಕೆ ಕಾಡದು
ಅಂಚೆ ಇಲಾಖೆಯ ಮೂಲಕ ಗೃಹಸಾಲ ವಿತರಣೆ