ನವದೆಹಲಿ- ತೈಲ ಕಂಪನಿಗಳು ವಿಮಾನ ಇಂಧನದ ಬೆಲೆಯನ್ನು ಶೇ 18.5 ರಷ್ಟು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಅಬಕಾರಿ ಮತ್ತು ಸುಂಕ ತೆರಿಗೆಯ ಮೇಲಿನ ಅಧಿಶುಲ್ಕದಲ್ಲಿಯೂ ಏರಿಕೆಯಾಗಿರುವ ಕಾರಣ ಬರುವ ಜೂನ್ 30 ರಿಂದ ವಿಮಾನ ಪ್ರಯಾಣ ದರದಲ್ಲಿ 300 ರೂಗಳಿಂದ ಐನೂರು ರೂಗಳವರೆಗೆ ಹೆಚ್ಚಳವಾಗಲಿದೆ ಎಂದು ಏರ್ ಇಂಡಿಯಾ ವಕ್ತಾರ್ ಮಾಹಿತಿ ನೀಡಿದ್ದಾರೆ.
750 ಕಿಮೀವರೆಗೆ ವಿಮಾನಪ್ರಯಾಣಕ್ಕೆ ಇಂಧನ ಅಧಿಶುಲ್ಕ ತೆರಿಗೆ 300 ರೂ.ಗಳಾಗಿದ್ದರೆ, 750 ಕಿಮೀಗಿಂತ ದೂರದ ಪ್ರಯಾಣಕ್ಕೆ 550 ರೂ.ಗಳು ಎಂದು ಏರ್ ಇಂಡಿಯಾ ವಕ್ತಾರ ತಿಳಿಸಿದ್ದಾರೆ. ಆದಾಗ್ಯೂ, ಜೆಟ್ ಏರ್‌ವೇಸ್, ಕಿಂಗ್‌ಫಿಷರ್ ಏರ್‌ಲೈನ್ಸ್ ಮತ್ತಿತರ ಖಾಸಗಿ ಏರ್‌ಲೈನ್‌ಗಳು ಪ್ರಯಾಣ ದರ ಹೆಚ್ಚಳ ಮಾಡುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.
ಬ್ಯಾರೆಲ್‌ಗೆ 127 ಅಮೆರಿಕ ಡಾಲರ್ ತಲುಪಿದ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆ ಬಿಸಿ ತಟ್ಟಿದ ದೇಶೀಯ ತೈಲ ಕಂಪೆನಿಗಳು ಏರ್ ಟರ್ಬೈನ್ ಇಂಧನದ ದರವನ್ನು ಏರಿಸಲು ನಿರ್ಧರಿಸಿದವು. ತೈಲ ಕಂಪೆನಿಗಳು ಎಟಿಎಫ್ ದರಗಳಲ್ಲಿ ಗಣನೀಯ ಏರಿಕೆ ಮಾಡಿದ ಹಿನ್ನೆಲೆಯಲ್ಲಿ, ಇಂಧನ ಮೇಲ್ತೆರಿಗೆ ಹೆಚ್ಚಳವು ಅನಿವಾರ್ಯ ಎಂದು ಏರ್ ಇಂಡಿಯ ವಕ್ತಾರ ತಿಳಿಸಿದರು.
ಎಟಿಎಫ್ ದರ ಹೆಚ್ಚಳದ ಪರಿಣಾಮವನ್ನು ಏರ್‌ಲೈನ್ ಪರಿಶೀಲನೆ ನಡೆಸುತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಅಭಿಪ್ರಾಯ ನೀಡುವುದಾಗಿ ಕಿಂಗ್‌ಫಿಷರ್ ವಕ್ತಾರ ತಿಳಿಸಿದರು.
|