ವಿಪ್ರೋ ತನ್ನ ಉದ್ಯೋಗಿಗಳಿಗಾಗಿ ಫಿಟ್ ಫಾರ್ ಲೈಫ್ ಎಂಬ ಸಮಗ್ರ ಯೋಗಕ್ಷೇಮ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದ್ದು, ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯ ಉದ್ದೇಶ ಹೊಂದಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಪ್ರೋ ಕಾರ್ಯಕಾರಿ ನಿರ್ದೇಶಕ ಮತ್ತು ಜಂಟಿ ಸಿಇಒ ಗಿರೀಶ್ ಪರಾಂಜಪೆ, ನೌಕರರ ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದು. ಈ ನಿಟ್ಟಿನಲ್ಲಿ ಫಿಟ್ ಫಾರ್ ಲೈಫ್ ಮತ್ತೊಂದು ಹೆಜ್ಜೆಯಾಗಿದ್ದು, ಎಲ್ಲ ಕಂಪನಿಗಳೂ ಭವಿಷ್ಯದ ಹಿತದೃಷ್ಟಿಯಿಂದ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾರಾಯಣ ಹೃದಯಾಲಯದ ನರವಿಜ್ಞಾನ ವಿಭಾಗದ ನಿರ್ದೇಶಕ ಡಾ.ತಿಮ್ಮಪ್ಪ ಹೆಗ್ಡೆ, ಡಯಟ್ ಮತ್ತು ಪೌಷ್ಟಿಕಾಹಾರ ತಜ್ಞೆ ಶೀಲಾ ಕೃಷ್ಣ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ, ವಿಪ್ರೋದ ವಿವಿಧ ಕೇಂದ್ರಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಆರೋಗ್ಯಕರ ಹವ್ಯಾಸ ಉತ್ತೇಜನ, ಧೂಮಪಾನ ವಿರೋಧೀ ಆಂದೋಲನ, ಒತ್ತಡ ನಿರ್ವಹಣೆ ಶಿಬಿರಗಳು, ಯೋಗ ಮತ್ತು ಧ್ಯಾನ, ಅಸ್ತಮಾ ಮತ್ತು ಅಲರ್ಜಿ ಕುರಿತ ಹಲವು ಜಾಗೃತಿ ಕಾರ್ಯಕ್ರಮಗಳು, ಚರ್ಮ ರಕ್ಷಣೆ, ತಲೆನೋವು ಸಮಸ್ಯೆ, ಮಾದಕ ವ್ಯಸನ ಇತ್ಯಾದಿಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
|