ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ, ದೇಶೀ ಆಟೋ ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ ಸೋಮವಾರ ತನ್ನ ಪ್ರಯಾಣಿಕರ ವಾಹನಗಳ ದರವನ್ನು ಶೇ.ಮೂರರಷ್ಟು ಹೆಚ್ಚಿಸಿದೆ.
ಈ ದರ ಏರಿಕೆಯು ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಕಂಪನಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ಟಾಟಾದ ಪ್ರಮುಖ ಮಾಡೆಲ್‌ಗಳಾದ ಇಂಡಿಕಾ, ಇಂಡಿಗೋ ಮತ್ತು ಇಂಡಿಗೋ ಮರೀನಾಗಳ ದರವನ್ನು ಶೇ.1ರಿಂದ 2ರಷ್ಟು ಹೆಚ್ಚಿಸಲಾಗಿದ್ದು, ಸುಮೋ ಮತ್ತು ಸಫಾರಿ ಮಾದರಿಯ ಬೆಲೆಗಳನ್ನು ಶೇ.2ರಿಂದ 3ರಷ್ಟು ಏರಿಸಿದೆ.
ಕಚ್ಚಾ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದಾಗಿ ಈ ರೀತ ಮಾಡಲಾಗಿದೆ ಎಂದು ಅದು ಹೇಳಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಮತ್ತು ಹುಂಡೈ ಕಂಪನಿಗಳೂ ತಮ್ಮ ಕಾರುಗಳ ಬೆಲೆ ಏರಿಕೆ ಮಾಡಿರುವುದು ಇಲ್ಲಿ ಗಮನಾರ್ಹ.
|