ಆಮದು ಉದಾರೀಕರಣ, ರಫ್ತಿನ ನಿಷೇಧ, ಸೀಮಾ ಶುಲ್ಕ ಮತ್ತು ಅಬಕಾರಿ ತೆರಿಗೆ ಇಳಿಕೆ, ಈ ರೀತಿಯ ಹಲವಾರು ಕ್ರಮಗಳನ್ನು ಹಣದುಬ್ಬರ ತಡೆಗೆ ಕೇಂದ್ರ ಸರ್ಕಾರವು ತೆಗೆದುಕೊಂಡಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಪುದುಚೇರಿಯಲ್ಲಿ ಹೇಳಿದ್ದಾರೆ.
ಈಗ ಎರುತ್ತಿರುವ ಹಣದುಬ್ಬರವು ಜಾಗತಿಕ ಕಚ್ಚಾ ತೈಲದ ಬೆಲೆಯನ್ನು ಅವಲಂಬಿಸಿದ್ದು, ಈ ಬಗ್ಗೆ ಗಮನ ಹರಿಸಲಾಗಿದೆ ಎಂದು ತಿಳಿಸಿದ ಅವರು, ಜಾಗತಿಕ ಮಟ್ಟದಲ್ಲಿನ ತೈಲ ಬೆಲೆಯ ಎರಿಕೆಯು ದಿನ ನಿತ್ಯ ಉಪಯೋಗದ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಸರ್ಕಾರವು, ಎರುತ್ತಿರುವ ಬೆಲೆ ಎರಿಕೆಯ ನಿಯಂತ್ರಣಕ್ಕೆ ಸಂಪೂರ್ಣ ಕ್ರಮಗಳನ್ನು ಕೈಗೊಂಡಿದ್ದು, ಬೆಲೆ ನಿಯಂತ್ರಣಕ್ಕೆ ಸೂಕ್ತವೆನಿಸುವಂತಹ ಯಾವುದೇ ಸಲಹೆ ಸೂಚನೆಗಳನ್ನು ತಿಳಿಸಲು ಮುಕ್ತ ಅವಕಾಶವಿದೆ ಎಂದು ತಿಳಿಸಿದರು.
ಆರ್ಥಿಕ ವ್ಯವಸ್ಥೆಯು, ಬಿಜೆಪಿ ಮತ್ತು ಎನ್‌ಡಿಎ ಸರ್ಕಾರ ಆಡಳಿತಾವಧಿಯಲ್ಲಿ ಶೇ.9 ಗಡಿ ದಾಟಿ ಮುನ್ನಡೆಯನ್ನು ಸಾಧಿಸಿತ್ತು ಎನ್ನುವುದನ್ನು ಜ್ಞಾಪಿಸಿದ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಮ್ ಅವರು ಸರ್ಕಾರ ಕೈಗೊಂಡ ಹಲವಾರು ಯೋಜನೆಗಳು ಗ್ರಾಮೀಣ ಬಡವರಿಗೆ ವರವಾಗಿ ಪರಿಣಮಿಸಿವೆ. ಗ ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಖಾತ್ರಿ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದು ಮತ್ತು ಮಂದಿನ ಎರಡು ದಶಕಗಳ ವರೆಗೆ ಯೋಜನೆಯನ್ನು ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರ 2.80 ಲಕ್ಷ ಕೋಟಿ ರೂ.ಮೊತ್ತವನ್ನು ಕೃಷಿ ಸಾಲ ಎಂದು ವಿತರಿಸುತ್ತಿದ್ದು, ಈಗ ಅದನ್ನು ಮೂರು ಲಕ್ಷ ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಕೃಷಿ ಸಾಲದಿಂದ 71,680 ಮಂದಿ ರೈತರಿಗೆ ನೆರವಾಗಲಿದ್ದು, ಅದು ಈ ತಿಂಗಳ ಅಂತ್ಯದಿಂದ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.
|