ಸಾರ್ವಜನಿಕ ವಲಯದ ತೈಲ ಪೂರೈಕೆ ಘಟಕಗಳು ವೈಮಾನಿಕ ಇಂಧನದ ಬೆಲೆಯನ್ನು ಶೇ.18.5ರಷ್ಟು ಏರಿಸಿರುವುದರೊಂದಿಗೆ, ಪ್ರಮುಖ ವಿಮಾನ ಕಂಪನಿಗಳು ಇಂಧನ ಸರ್ಚಾರ್ಜ್ ಬೆಲೆಯನ್ನು ಏರಿಸಿದ್ದು, ವಿಮಾನ ಪ್ರಯಾಣ ಮಂಗಳವಾರದಿಂದ ದುಬಾರಿಯಾಗಿದೆ.
ಏರ್ ಇಂಡಿಯಾ ಶನಿವಾರವೇ ಇಂಧನ ಸರ್ಜಾರ್ಜ್ ದರ ಏರಿಸಿರುವುದನ್ನು ಪ್ರಕಟಿಸಿದ್ದರೆ, ಇತರ ವಿಮಾನ ಕಂಪನಿಗಳು ಸೋಮವಾರ ಬೆಲೆ ಏರಿಸಿವೆ. ಜೆಟ್ ಏರ್‌ವೇಸ್, ಕಿಂಗ್‌ಫಿಶರ್ ಮತ್ತು ಡೆಕ್ಕನ್ ಕಂಪನಿಗಳು ಏರ್ ಇಂಡಿಯಾ ಜೊತೆ ಇಂಧನ ಸರ್ಜಾರ್ಜ್ ದರ ಏರಿಕೆಯನ್ನು ಈಗಾಗಲೇ ಜಾರಿಗೊಳಿಸಿವೆ.
ಈ ದರ ಏರಿಕೆಯೊಂದಿಗೆ, ವಿಮಾನ ಪ್ರಯಾಣಿಕರೊಬ್ಬರು 750 ಕಿ.ಮೀ.ವರೆಗಿನ ಪ್ರಯಾಣಕ್ಕೆ 2250 ರೂ. ಹಾಗೂ ಹೆಚ್ಚಿನ ದೂರಕ್ಕೆ 2900 ರೂ. ಇಂಧನ ಸರ್ಜಾರ್ಜ್ ರೂಪದಲ್ಲಿ ತೆರಬೇಕಾಗುತ್ತದೆ ಎಂದು ಜೆಟ್ ಏರ್‌ವೇಸ್ ವಕ್ತಾರರು ತಿಳಿಸಿದ್ದಾರೆ.
ಕಿಂಗ್ ಫಿಶರ್ ಮತ್ತು ಡೆಕ್ಕನ್ ಕೂಡ ಇಂಧನ ಸರ್ಜಾರ್ಜನ್ನು ಸಮೀಪದ ಪ್ರಯಾಣಕ್ಕೆ 300 ರೂ. ಮತ್ತು ದೂರದ ಪ್ರಯಾಣಕ್ಕೆ 550 ರೂ. ಹೆಚ್ಚು ವಿಧಿಸಲಿವೆ. ಒಂದೆರಡು ದಿನಗಳಲ್ಲಿ ಇತರ ವಿಮಾನ ಕಂಪನಿಗಳೂ ದರ ಏರಿಸುವ ನಿರೀಕ್ಷೆ ಇದೆ.
|