ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಪುಟ ಸಭೆ: ನಾಳೆ ತೈಲ ಬೆಲೆಯಲ್ಲಿ ಹೆಚ್ಚಳ?  Search similar articles
ನವದೆಹಲಿ :ಕೇಂದ್ರದ ಸಂಪುಟ ಸಭೆ ನಾಳೆ ಸಭೆ ಸೇರಲಿದ್ದು, ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಗಳಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ತೈಲ ದರ ಏರಿಕೆ ನಿರ್ಧಾರ ಕುರಿತಂತೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನಾವು ಇನ್ನೂ ತೈಲ ದರ ಏರಿಕೆ ನಿರ್ಧಾರ ಕುರಿತಂತೆ ಚರ್ಚಿಸಲಾಗುತ್ತಿದ್ದು, ನಾಳೆ ಸಂಪುಟ ಸಭೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ಪೆಟ್ರೋಲ್, ಡಿಜೈಲ್ ಹಾಗೂ ಗ್ಯಾಸ್ ದರಗಳ ಏರಿಕೆಯ ಕುರಿತಂತೆ ನಾಳೆ ಬೆಳಿಗ್ಗೆ ಸಂಪುಟ ಸಭೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಪ್ರಕಟಿಸಿದೆ.

ಪ್ರಧಾನಿ ಮನಮೋಹನ್‌ಸಿಂಗ್ ಸೋಮವಾರದಂದು ಇಂಧನ ದರ ಹೆಚ್ಚಳ ಕುರಿತಂತೆ ಸೂಚನೆ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರಗಳ ಏರಿಕೆಯ ಹಿನ್ನೆಲೆಯಲ್ಲಿ ದೇಶಿಯ ಗ್ರಾಹಕರನ್ನು ಪ್ರತ್ಯೇಕಿಸಲಾಗದು ಎಂದು ಹೇಳಿದ್ದಾರೆ.

ಜಾಗತಿಕ ತೈಲ ದರಗಳ ಹೆಚ್ಚಳದಿಂದಾಗಿ 2,25,040 ಕೋಟಿ ರೂಪಾಯಿಗಳ ನಷ್ಟವನ್ನು ತೈಲ ಕಂಪೆನಿಗಳು ಅನುಭವಿಸುತ್ತಿದ್ದು. ಕಳೆದ ಒಂದು ವಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ , ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಹಿರಿಯ ಸಂಪುಟ ಸಚಿವರೊಂದಿಗೆ ತೈಲ ದರ ಕುರಿತಂತೆ ಸಮಾಲೋಚನೆ ನಡೆಸಿದ್ದಾರೆ.

ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೀಯೋರಾ ಪ್ರತಿ ಲೀಟರ್‌ ಪೆಟ್ರೋಲ್‌ಗೆ 10ರೂ,ಡಿಸೈಲ್‌ಗೆ 5ರೂ, ಪ್ರತಿ ಸಿಲಿಂಡರ್‌ ಅನಿಲಕ್ಕೆ 50ಪೈಸೆ ಹೆಚ್ಚಳ ಮಾಡುವಂತೆ ಸಂಪುಟ ಸಮಿತಿಯನ್ನು ಒತ್ತಾಯಿಸಿದ್ದಾರೆ.









ಮತ್ತಷ್ಟು
ವಾರ್ಷಿಕ ಹಣದುಬ್ಬರ ಶೇ 9 ರಷ್ಟು!
ಸರ್ಚಾರ್ಜ್: ಆಗಸಕ್ಕೇರುತ್ತಿದೆ ವಿಮಾನ ಪ್ರಯಾಣ ದರ
ಮಾರುತಿ ಕಾರುಗಳ ಮಾರಾಟದಲ್ಲಿ ಶೇ.16 ಹೆಚ್ಚಳ
ತೆರಿಗೆ ಇಳಿಕೆಯಿಂದ ಹಣದುಬ್ಬರದ ನಿಯಂತ್ರಣ: ಚಿದು
ಟಾಟಾದಿಂದಲೂ ಕಾರುಗಳ ಬೆಲೆ ಏರಿಕೆ
ವಿಪ್ರೋ ಉದ್ಯೋಗಿಗಳಿಗೆ ಯೋಗಕ್ಷೇಮ ಕಾರ್ಯಕ್ರಮ