ಪಣಜಿ :ಗೋವಾದಲ್ಲಿರುವ ವಿಶೇಷ ಆರ್ಥಿಕವಲಯಗಳನ್ನು ಕೇಂದ್ರ ಸರಕಾರ ಅನುಮೋದಿಸಿ ಪ್ರಕಟಿಸಲಾಗಿದ್ದು ಮರುಘೋಷಣೆ ಮಾಡುವಂತೆ ಸರಕಾರ ಸಲ್ಲಿಸಿದ ಮನವಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಪ್ರಕಟಿಸಿದೆ.
ಗೋವಾ ಸರಕಾರದಿಂದ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಮನವಿ ಪತ್ರ ತಲುಪಿದ್ದು ಮುಂಬರುವ ಎರಡು ದಿನಗಳಲ್ಲಿ ಚರ್ಚೆಯ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಜೆ.ಪಿ.ಸಿಂಗ್ ತಿಳಿಸಿದ್ದಾರೆ.
ಕೇಂದ್ರ ವಾಣಿಜ್ಯ ಸಚಿವಾಲಯ ಗೋವಾದಲ್ಲಿರುವ ಮೂರು ವಿಶೇಷ ಆರ್ಥಿಕವಲಯಗಳನ್ನು ಮರುಘೋಷಣೆ ಮಾಡಲು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಗೋವಾ ಸರಕಾರ ಎರಡು ವಾರಗಳಲ್ಲಿ ಅಂತಿಮ ನಿರ್ಧಾರಕ್ಕೆ ಬರಬೇಕಾಗಿದೆ. ಈಗಾಗಲೇ ವಿಶೇಷ ಆರ್ಥಿಕ ವಲಯಗಳಲ್ಲಿರುವ ಕಂಪೆನಿಗಳು ಎಸ್‌ಇಝ್ ರದ್ದುಪಡಿಸುವ ಸರಕಾರದ ವಿರುದ್ದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಕರಾವಳಿ ಪ್ರದೇಶದಲ್ಲಿ ಮೂರು ಪ್ರಮುಖ ಕೈಗಾರಿಕೆ ಕಂಪೆನಿಗಳಿಗೆ ಕೆಲಸವನ್ನು ಸ್ಥಗಿತಗೊಳಿಸುವಂತೆ ನೀಡಿದ ಸರಕಾರದ ನಿರ್ಧಾರದ ಕುರಿತಂತೆ ಎರಡು ವಾರಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಮುಂಬೈ ಹೈಕೋರ್ಟ್‌ನಲ್ಲಿರುವ ಗೋವಾ ಪೀಠ ಗೋವಾ ಸರಕಾರಕ್ಕೆ ಆದೇಶಿಸಿದೆ.
ಗೋವಾ ಸರಕಾರ ಸಾರ್ವಜನಿಕರ ಹಾಗೂ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅನುಮೋದನೆ ಹಾಗೂ ಅಧಿಸೂಚನೆಯ ವಿವಿಧ ಹಂತಗಳಲ್ಲಿರುವ 12 ಎಸ್‌ಇಝ್‌ಗಳನ್ನು ರದ್ದುಪಡಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದು ಕೇವಲ ಮೂರು ಕಂಪೆನಿಗಳಿಗೆ ಅನುಮೋದನೆ ನೀಡುವಂತೆ ವಾಣಿಜ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು.
|