ಮೋಸದ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಸಾಬೀತು ಆಗಿರುವ ಹುಂಡೈ ಗ್ರುಪ್ ಮುಖ್ಯಸ್ಥನಿಗೆ ಈ ಮೊದಲು ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ಮೂರು ವರ್ಷಗಳ ಕಾಲ ದಕ್ಷಿಣ ಕೋರಿಯದ ಉಚ್ಚ ನ್ಯಾಯಾಲಯ ಅಮಾನತ್ತುಗೊಳಿಸಿ ಆದೇಶ ಹೋರಡಿಸಿದೆ.
ದೇಶದ ಖ್ಯಾತ ಉದ್ಯಮಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ರದ್ದುಗೊಳಿಸುವ ತೀರ್ಪು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಬಹುದು. ಒಂದು ಪಕ್ಷ ಹುಂಡೈ ಮುಖ್ಯಸ್ಥನಿಗೆ ಜೈಲು ಶಿಕ್ಷೆ ವಿಧಿಸಿದರೆ ಜಗತ್ತಿನಲ್ಲಿ ಆರನೇ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿಯ ಕಾರ್ಯಶೈಲಿಯ ಮೇಲೆ ಹೊಡೆತ ಬೀಳುವ ಸಾಧ್ಯತೆ ಇರುವುದರಿಂದ ಮತ್ತು ಏಷಿಯಾದ ನಾಲ್ಕನೆ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿರುವ ಕೋರಿಯಾದ ಅರ್ಥ ವ್ಯವಸ್ಥೆಯ ಮೇಲೆ ಜೈಲು ಶಿಕ್ಷೆಯು ಪ್ರತಿಕೂಲ ಪರಿಣಾಮ ಬೀರಬಹುದು.
ಸ್ಯಾಮಸಂಗ್ ಕಂಪನಿಯ ಮುಖ್ಯಸ್ಥರು ಕೂಡ ಎರಡು ತಿಂಗಳುಗಳ ಹಿಂದೆ ತೆರಿಗೆ ವಂಚನೆ ಮತ್ತು ನಂಬಿಕೆ ದ್ರೋಹದ ಆರೋಪಗಳನ್ನು ಕೈಬಿಡುವುದಾಗಿ ಹೇಳಿದ ಎರಡು ತಿಂಗಳುಗಳ ನಂತರ ನ್ಯಾಯಾಲಯ ಶಿಕ್ಷೆಯನ್ನು ಅಮಾನತ್ತುಗೊಳಿಸುವ ತೀರ್ಮಾನ ತೆಗೆದುಕೊಂಡಿದೆ.
|