ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೂಕದ ಗಗನ ಸಖಿಯರಿಗೆ ಅವಕಾಶವಿಲ್ಲ: ತೀರ್ಪು  Search similar articles
ನಿಗದಿತ ತೂಕವನ್ನು ಕಾಯ್ದುಕೊಳ್ಳಲು ಅಸಮರ್ಥರಾಗಿರುವ ಗಗನ ಸಖಿಯರನ್ನು ವಿಮಾನ ಯಾನ ಸೇವಾ ಸಂಸ್ಥೆಯು ಸೇವೆಯಿಂದ ಕಿತ್ತು ಹಾಕಬಹುದು ಎಂದು ದೆಹಲಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ.

ನಿಗದಿತ ತೂಕ ಕಾಯ್ದುಕೊಳ್ಳಲು ಅಸಮರ್ಥರಾದ ಐವರು ಗಗನ ಸಖಿಯರನ್ನು ಏರ್ ಇಂಡಿಯಾ ವಜಾಗೊಳಿಸಿದ ಕ್ರಮದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ಉಚ್ಚ ನ್ಯಾಯಾಲಯವು ಮೇಲಿನಂತೆ ತೀರ್ಪು ನೀಡಿತು.

ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ನೇತೃತ್ವದ ವಿಚಾರಣಾ ಪೀಠವು ಗಗನ ಸಖಿಯರ ಸೇವಾ ನಿಯಮಕ್ಕೆ ಸಂಬಂಧಿಸಿದಂತೆ ಜಾರಿ ಮಾಡಿರುವ ನಿಯಮಗಳಲ್ಲಿ ಅಕ್ಷೇಪಾರ್ಹವಾದವುಗಳು ಇಲ್ಲ ಎಂದು ತೀರ್ಪು ನೀಡಿದೆ.

ಏರ್ ಇಂಡಿಯಾದ ನಿಯಮಾವಳಿಗಳ ಪ್ರಕಾರ ಗಗನ ಸಖಿಯರಾಗಿ ನೇಮಕಗೊಳ್ಳುವ 152 ಸೆ.ಮೀ 18 ವರ್ಷದ ಯುವತಿ ಗರಿಷ್ಟ 50 ಕೆಜಿ ಇರಬೇಕು. ಇದೇ ಎತ್ತರದ 26 ರಿಂದ 30 ವರ್ಷದ ಯುವತಿ ಗರಿಷ್ಟ 56 ಕೆಜಿ ತೂಕವನ್ನು ಹೊಂದಿರಬೇಕು ಎಂದು ಹೇಳಲಾಗಿದ್ದು. ಈ ವಿಚಾರದಲ್ಲಿ ಯಾವುದೇ ರಿಯಾಯಿತಿ ಮತ್ತು ಅನುಕಂಪ ಸಲ್ಲದು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಮತ್ತಷ್ಟು
ಹುಂಡೈ ಮುಖ್ಯಸ್ಥನ ಶಿಕ್ಷೆ
ಎಸ್‌ಇಝ್‌ ಮರು ಘೋಷಣೆಗೆ ಕೇಂದ್ರ ನಕಾರ
ಸಂಪುಟ ಸಭೆ: ನಾಳೆ ತೈಲ ಬೆಲೆಯಲ್ಲಿ ಹೆಚ್ಚಳ?
ವಾರ್ಷಿಕ ಹಣದುಬ್ಬರ ಶೇ 9 ರಷ್ಟು!
ಸರ್ಚಾರ್ಜ್: ಆಗಸಕ್ಕೇರುತ್ತಿದೆ ವಿಮಾನ ಪ್ರಯಾಣ ದರ
ಮಾರುತಿ ಕಾರುಗಳ ಮಾರಾಟದಲ್ಲಿ ಶೇ.16 ಹೆಚ್ಚಳ