ಯುನೈಟೆಡ್ ಎಮಿರೇಟ್ಸ್ ಮೂಲದ ಎಟೆಲ್ ಎಡಿ ಮತ್ತು ಎಟಿ ಆಂಡ್ ಟಿ ಕಂಪನಿಗಳು ಜಂಟಿಯಾಗಿ ಸ್ಪೈಸ್ ಟೆಲಿಕಾಮ್ ಕಂಪನಿಯಲ್ಲಿ ಶೇರು ಬಂಡವಾಳ ಹೂಡುವುದಕ್ಕೆ ಆಸಕ್ತಿ ತೋರಿವೆ ಎಂದು ಕಂಪನಿಯ ಚೇರಮನ್ ಬಿ.ಕೆ.ಮೋದಿ ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಮೋದಿ ಅವರು ಭಾರತದಲ್ಲಿ ಕಾರ್ಯನಿರ್ವಹಿಸಲು ಸಿದ್ದವಿರುವ ಯಾವುದೇ ಕಂಪನಿಗೆ ತನ್ನ ಪಾಲಿನ ಬಂಡವಾಳವನ್ನು ಕೆಲ ಶರತ್ತುಗಳೊಂದಿಗೆ ಮಾರುವುದಕ್ಕೆ ಸಿದ್ದವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಕರ್ನಾಟಕ ಮತ್ತು ಪಂಜಾಬ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಪೈಸ್ ಕಂಪನಿಗೆ ಪಾನ್-ಇಂಡಿಯಾ ಟೆಲಿಕಾಮ್ ಪರವಾನಿಗೆಯನ್ನು ನಿರಾಕರಿಸಲಾಗಿತ್ತು.
ಆಂಧ್ರ ಪ್ರದೇಶ, ಹರಿಯಾಣಾ ಮತ್ತು ಮಹಾರಾಷ್ಟ್ರಗಳಲ್ಲಿ ಮಾತ್ರ ಸೇವಾ ಜಾಲ ವಿಸ್ತರಿಸುವುದಕ್ಕೆ ದೂರ ಸಂಪರ್ಕ ಇಲಾಖೆಯು ಪರವಾನಗಿ ನೀಡಿದ್ದು. ಉಳಿದ ವಲಯಗಳಲ್ಲಿ ವಿಸ್ತರಿಸುವುದಕ್ಕೆ ಅನುಮತಿ ನೀಡಿಲ್ಲ.
ಭರದಿಂದ ವಿಸ್ತಾರವಾಗುತ್ತಿರುವ ಭಾರತೀಯ ದೂರ ಸಂಪರ್ಕ ಉದ್ಯಮದಲ್ಲಿ ಶೇ 74ರಷ್ಟು ವಿದೇಶಿ ಬಂಡವಾಳ ತೋಡಗಿಸುವುದಕ್ಕೆ ಭಾರತ ಸರಕಾರ ಅವಕಾಶ ನೀಡುತ್ತಿದೆ.
|