ಭಾರತದಲ್ಲಿ ತೈಲ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದ್ದು, ಬುಧವಾರ ಬ್ಯಾರೆಲ್ ಒಂದರ ಬೆಲೆ 123.15ರವರೆಗೂ ಇಳಿಕೆಯಾಯಿತು.
ಮೂರು ವಾರಗಳಲ್ಲಿ ಕನಿಷ್ಠ ಮಟ್ಟಕ್ಕೆ ತಲುಪಿದ ಅಮೆರಿಕ ಕಚ್ಚಾ ತೈಲ ಬೆಲೆಯು, 123.15 ಡಾಲರ್‌ನಷ್ಟು ಇಳಿಕೆಯಾಗಿದ್ದರೆ, ಬಳಿಕ 123.46 ಡಾಲರಿಗೆ ತಲುಪಿತ್ತು. ಲಂಡನ್‌ನ ಬ್ರೆಂಟ್ ಕಚ್ಚಾತೈಲ ಬೆಲೆ ಕೂಡ 1.26 ಡಾಲರ್ ಇಳಿದು, 123.32 ಡಾಲರ್‌ನಲ್ಲಿ ವಹಿವಾಟು ನಡೆಯುತ್ತಿತ್ತು.
ಡಾಲರ್‌ನಲ್ಲೇ ವಹಿವಾಟು ನಡೆಸುವ ವಸ್ತುಗಳ ಬೆಲೆ ಇಳಿಕೆಗೆ ಕಾರಣವಾಗುವ ಡಾಲರ್ ದುರ್ಬಲತೆಯಿಂದಾಗಿಯೇ ಕಚ್ಚಾ ತೈಲ ಬೆಲೆ ಏರುತ್ತಲೇ ಹೋಗಿ ಮೇ ತಿಂಗಳಲ್ಲಿ 135 ಡಾಲರ್‌ವರೆಗೂ ತಲುಪಿತ್ತು.
ಏರಿದ ಬೆಲೆಗಳು ಬೇಡಿಕೆ ಕುಸಿಯುವಂತೆ ಮಾಡಿದ್ದು, ಬೆಳೆಯುತ್ತಿರುವ ರಾಷ್ಟ್ರಗಳ ಮೇಲೆ ಬಲುದೊಡ್ಡ ಪರಿಣಾಮ ಬೀರಿದೆ. ಕೆಲವು ರಾಷ್ಟ್ರಗಳು ಸಬ್ಸಿಡಿ ಹೆಚ್ಚಿಸುವ ಮೂಲಕ ಹೆಚ್ಚು ನಷ್ಟ ಅನುಭವಿಸಲಾರಂಭಿಸಿದೆ.
|