ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲದರ ಹೆಚ್ಚಳದಿಂದ ಹಣದುಬ್ಬರ ಶೇ 9ರಷ್ಟು ಏರಿಕೆ  Search similar articles
ನವದೆಹಲಿ :ತೈಲದರಗಳ ಅಧಿಕ ಏರಿಕೆಯಿಂದಾಗಿ ದೇಶದ ಹಣದುಬ್ಬರದಲ್ಲಿ ಪ್ರತಿಶತ 9ರಷ್ಟು ಹೆಚ್ಚಳವಾಗಲಿದೆ ಎಂದು ಹಣಕಾಸು ಇಲಾಖೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರಕಾರ ಪೆಟ್ರೋಲ್ ದರವನ್ನು 5ರೂ. ಡಿಸೈಲ್‌ 3 ರೂ. ಹಾಗೂ ಅನಿಲ ಸಿಲೆಂಡರ್ ದರವನ್ನು 50 ರೂ.ಗಳಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ತೈಲದರಗಳ ಏರಿಕೆಯಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ದೇಶದ ಹಣದುಬ್ಬರ ಪ್ರತಿಶತ 9ರ ಗಡಿಯನ್ನು ದಾಟಲಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ಅಭಿಕ್ ಬರುವಾ ಹೇಳಿದ್ದಾರೆ.

ಐಸಿಐಸಿಐ ಬ್ಯಾಂಕ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ಕೆ.ವಿ.ಕಾಮತ್ ಅವರು ಮಾತನಾಡಿ ಶೇ10ರಷ್ಟು ಏರಿಕೆಯಿಂದಾಗಿ ಹಣದುಬ್ಬರ ಶೇ1.3ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.

ತೈಲ ದರ ಹೆಚ್ಚಳದಿಂದಾಗಿ ಶೇ 0.5ರಿಂದ 0.6ರಷ್ಟು ಹಣದುಬ್ಬರ ಹೆಚ್ಚಳವಾಗಬಹುದು ಎಂದು ಪೆಟ್ರೋಲೀಯಂ ಕಾರ್ಯದರ್ಶಿ ಎಂ ಎಸ್. ಶ್ರೀನಿವಾಸನ್ ತಿಳಿಸಿದ್ದಾರೆ.ಪೆಟ್ರೋಲ್ ಮತ್ತು ಡಿಸೈಲ್ ‌ಕ್ರಮವಾಗಿ ಶೇ11 ಹಾಗೂ 8.5ರಷ್ಟು ದರಗಳಲ್ಲಿ ಏರಿಕೆಯಾಗಿದ್ದರಿಂದ ಹಣದುಬ್ಬರ ಶೇ 0.3ರಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ತೈಲ: ಭಾರತದಲ್ಲಿ ಏರಿಕೆ, ಅಂತಾರಾಷ್ಟ್ರೀಯ ಬೆಲೆ ಇಳಿಕೆ
ವಿದೇಶಿ ಬಂಡವಾಳದತ್ತ ಸ್ಪೈಸ್ ಟೆಲಿಕಾಮ್
ಪೆಟ್ರೋಲ್ 5, ಡೀಸೆಲ್ 3, ಗ್ಯಾಸ್ 50ರೂ. ಏರಿಕೆ
ತೂಕದ ಗಗನ ಸಖಿಯರಿಗೆ ಅವಕಾಶವಿಲ್ಲ: ತೀರ್ಪು
ಹುಂಡೈ ಮುಖ್ಯಸ್ಥನ ಶಿಕ್ಷೆ
ಎಸ್‌ಇಝ್‌ ಮರು ಘೋಷಣೆಗೆ ಕೇಂದ್ರ ನಕಾರ