ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾವಳಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಹಾರಾ ಇಂಡಿಯಾ ಫೈನಾನ್ಶಿಯಲ್ ಕಾರ್ಪೋರೇಶನ್ ಲಿಮಿಟೆಡ್‌ನ್ನು ನಿಷೇಧಿಸಲಾಗಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ಆರ್‌ಬಿಐ ತಿಳಿಸಿದೆ.
ಸಾರ್ವಜನಿಕ ಠೇವಣಿಯನ್ನು ಸ್ವೀಕರಿಸದಂತೆ ಆದೇಶ ನೀಡಿದ್ದು, ನಿಷೇಧ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಆರ್‌ಬಿಐ ತಿಳಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಷೇಧ ತಡೆಯನ್ನು ಸಹಾರಾ ಭಾರಿ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದು,ಇದಕ್ಕೆ ಸೆಂಟ್ರಲ್ ಬ್ಯಾಂಕ್ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿದೆ.
ಲಕ್ನೋ ಮೂಲದ ಕಂಪೆನಿಯ ಮಾಲೀಕರಾದ ಸುಬ್ರತೋ ರಾಯ್ ಠೇವಣಿದಾರರ ಹಣ ಸುರಕ್ಷಿತವಾಗಿದ್ದು ಆರ್‌ಬಿಐ ಆದೇಶದಿಂದ ಆತಂಕಪಡಬೇಕಾಗಿಲ್ಲ.ಸಹಾರ ಉತ್ತಮ ಹಣಕಾಸಿನ ಸ್ಥಿತಿಯಲ್ಲಿದ್ದು,ಆರ್‌ಬಿಐ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
|