ಮುಂಬೈ : ರಿಯಲ್ ಎಸ್ಟೇಟ್ ವಹಿವಾಟಿನ ಕಂಪೆನಿಯಾದ ಡಿಎಲ್‌ಎಫ್ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ 7,812.03 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದ್ದು ಪ್ರಸಕ್ತ ವರ್ಷದ ಲಾಭದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಕಂಪೆನಿ ತ್ರೈಮಾಸಿಕ ವರದಿಯಲ್ಲಿ ತಿಳಿಸಿದೆ.
2006-07ರ ಸಾಲಿನಲ್ಲಿ ಡಿಎಲ್‌ಎಫ್ 1,933.65 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದ್ದು, 2007-08ರ ಸಾಲಿನಲ್ಲಿ ವಹಿವಾಟಿನ ನಿವ್ವಳ ಲಾಭ ನಾಲ್ಕು ಪಟ್ಟು ಏರಿಕೆಯಾಗಿದೆ. 2006-07ರ ಸಾಲಿನಲ್ಲಿ ಒಟ್ಟು ಆದಾಯ 4,053.3 ಕೋಟಿ ರೂ.ಗಳಿದ್ದು,2007-08ರಲ್ಲಿ ಒಟ್ಟು ಆದಾಯ 14,683.91 ಕೋಟಿ ರೂ.ಗಳಾಗಿವೆ ಎಂದು ಮುಂಬೈ ಷೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಡಿಎಲ್ಎಫ್ ಅಡಳಿತ ಮಂಡಳಿ 2007-08ರ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ 2ರೂ.ಮುಖಬೆಲೆಯ ಷೇರುದಾರರಿಗೆ 4ರೂ.ಗಳನ್ನು ನೀಡಿ ತನ್ನ ಷೇರುದಾರರಿಗೆ ಶೇ200ರಷ್ಟು ಡಿವಿಡೆಂಡ್ ನೀಡಿ ಆದೇಶ ಹೊರಡಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
|