ಹೈದ್ರಾಬಾದ್ :ಜಾಗತಿಕ ಮಟ್ಟದಲ್ಲಿ ಅಹಾರ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಪ್ರದಾನ ದೇಶವಾದ ಭಾರತ ಜಾಗತಿಕ ಅಹಾರ ಉತ್ಪನ್ನಗಳ ಬೇಡಿಕೆ ಹಾಗೂ ಪೂರೈಕೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾದ ಗವರ್ನರ್ ವೈ.ವಿ.ರೆಡ್ಡಿ ತಿಳಿಸಿದ್ದಾರೆ.
ಆಚಾರ್ಯ ಎನ್.ಜಿ ರಂಗಾ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು ಜಾಗತಿಕವಾಗಿ ಅಹಾರ ದರಗಳಲ್ಲಿ ಹೆಚ್ಚಳವಾಗುತ್ತಿದೆ ಎಂದು ಹೇಳಿದ್ದಾರೆ.
ಜಾಗತಿಕ ಅಹಾರ ಸೂಚ್ಯಂಕ 2006ರಲ್ಲಿ ಶೇ10.5ರಷ್ಟಿದ್ದು 2007ರಲ್ಲಿ ಶೇ15.2ರಷ್ಟಿದ್ದು 2008ರ ಆರಂಭಿಕ ನಾಲ್ಕು ತಿಂಗಳಲ್ಲಿ ಶೇ 40.8ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೃಷಿ ಉತ್ಪನ್ನಗಳ ಮೇಲೆ ಸಾಲ ನೀಡಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಸಕಾಲದಲ್ಲಿ ಉಪಯೋಗಕ್ಕೆ ಬಾರದೇ ಇರುವುದರಿಂದ ಯೋಜನೆಗಳು ವಿಫಲವಾಗುತ್ತಿವೆ ಎಂದು ಹೇಳಿದ್ದಾರೆ.
|