ನವದೆಹಲಿ : ಕೇಂದ್ರ ಸರಕಾರ ತೈಲದರವನ್ನು ಹೆಚ್ಚಳ ಮಾಡಿ ಹೊರಡಿಸಿರುವ ಆದೇಶ ವಿಳಂಬವಾಗಿ ಹೊರಬಂದಿದ್ದು, ಈಗಾಗಲೇ ದೇಶಿಯ ತೈಲ ಕಂಪೆನಿಗಳು ಹೆಚ್ಚಿನ ನಷ್ಟವನ್ನು ಅನುಭವಿಸಿವೆ ಎಂದು ಕೈಗಾರಿಕೋದ್ಯಮದ ಸಂಘ ಅಸೋಚಾಮ್ ವರದಿ ಮಾಡಿದೆ.
90 ಕಾರ್ಯನಿರ್ವಾಹಕ ಅಧಿಕಾರಿಗಳ ಸಮೀಕ್ಷೆ ಮಾಡಿದ ಅಸೋಚಾಮ್ ಕೇಂದ್ರ ಸರಕಾರ ತೈಲ ದರ ಹೆಚ್ಚಳ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದ್ದರಿಂದ ತೈಲ ಕಂಪೆನಿಗಳು ಭಾರಿ ನಷ್ಟ ಎದುರಿಸಬೇಕಾಗಿ ಬಂದಿದೆ ಎಂದು ತಿಳಿಸಿದೆ.
ದೇಶದ ಸಾಮಾನ್ಯ ಜನರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹೆಚ್ಚಳ ಕುರಿತಂತೆ ಮಾಹಿತಿಯ ಕೊರತೆಯ ಹಿನ್ನೆಲೆಯಲ್ಲಿ ಸಿಲೆಂಡರ್ ದರದಲ್ಲಿ 50 ರೂ.ಗಳ ಹೆಚ್ಚಳವಾಗಿರುವುದು ಅನಿರೀಕ್ಷಿತ ಆಘಾತ ನೀಡಿದೆ ಎಂದು ತಿಳಿಸಿದೆ.
ದೇಶದ ಜನಸಾಮಾನ್ಯರು ಸಿಲೆಂಡರ್ ದರದಲ್ಲಿ 20-25 ರೂ.ಗಳ ಹೆಚ್ಚಳವಾಗಬಹದು ಎಂದು ಭಾವಿಸಿದ್ದರು. ಆದರೆ ಹಿಂದೆಂದು ಆಗಿರದಂತಹ ದರ ಹೆಚ್ಚಳವನ್ನು ಸಾಮಾನ್ಯ ಜನರಿಗೆ ಭರಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದೆ.
|