ನಿಲ್ಲಲು ನಿರಾಕರಿಸುತ್ತಿರುವ ಹಣದುಬ್ಬರ ಈ ವಾರದ ಅವಧಿಯಲ್ಲಿಯೂ ಹೆಚ್ಚಳವಾಗಿದ್ದು, ಮೇ 14ಕ್ಕೆ ಕೊನೆಗೊಂಡ ವಾರದಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ಹಣದುಬ್ಬರದ ಪ್ರಮಾಣವು ಶೇ 8.24 ತಲುಪಿದೆ.
ವಾರದ ಹಣಕಾಸು ಸ್ಥಿತಿಗತಿಯ ವರದಿಯನ್ನು ನೀಡಿದ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಮ್ ಅವರು ಖಾದ್ಯ ವಸ್ತುಗಳ ಬೆಲೆಗಳು ಏರು ಗತಿಯಲ್ಲಿ ಸಾಗುತ್ತಿದ್ದು, ಸರಕಾರ ಬೆಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಅನುಸರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲಿಯಮ್ ವಸ್ತುಗಳ ಬೆಲೆಯಲ್ಲಿನ ಏರಿಕೆಯು ಮುಂಬರುವ ದಿನಗಳಲ್ಲಿ ಹಣದುಬ್ಬರದಲ್ಲಿ ಹೆಚ್ಚಳ ಉಂಟು ಮಾಡಲಿದೆ. ಮೇ 17ಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರದ ಪ್ರಮಾಣವು ಶೇ 8.1 ದಾಖಲಾಗಿತ್ತು. ಒಂದು ವರ್ಷದ ಹಿಂದೆ ಸಗಟು ದರ ಸೂಚ್ಯಂಕ ಪಟ್ಟಿಯು ಶೇ 5.15ಕ್ಕೆ ವಾರದ ಅವಧಿಯ ಸರಕು ವಹಿವಾಟಿನಲ್ಲಿ ದಾಖಲಾಗಿತ್ತು. ಪೆಟ್ರೋಲಿಯಂ ಉತ್ಪನ್ನಗಳಲ್ಲಿನ ಬೆಲೆ ಏರಿಕೆಯು ಸರಕು ಸಾಗಾಣಿಕೆಯ ವೆಚ್ಚದ ಪರಿಣಾಮ ಬೀರುವುದರಿಂದ ಸಗಟು ದರಗಳು ಸೇರಿದಂತೆ ಚಿಲ್ಲರೆ ಮಾರಾಟದ ಮೇಲೆಯೂ ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಇದೆ.
ಮೇ 24ಕ್ಕೆ ಕೊನೆಗೊಂಡ ವಾರದಲ್ಲಿ ಆಹಾರೇತರ ವಸ್ತುಗಳಾದ ಕಚ್ಚಾ ರಬ್ಬರ್, ಕಚ್ಚಾ ಹತ್ತಿ ಮತ್ತು ಶೇಂಗಾ ಬೀಜಗಳ ಬೆಲೆಯಲ್ಲಿ ಪ್ರತಿಶತ 1-2ರಷ್ಟು ಅಧಿಕವಾಗಿದೆ. ದ್ವಿದಳ ಧಾನ್ಯಗಳ ಬೆಲೆಯಲ್ಲಿ ಶೇ 0.5, ತರಕಾರಿ ಮತ್ತು ಹಣ್ಣುಗಳ ಬೆಲೆಯು ಶೇ 1 ರಷ್ಟು ಅಧಿಕಗೊಂಡಿವೆ.
|