ಭಾರತ, ಮಧ್ಯಪ್ರಾಚ್ಯ ಹಾಗೂ ಏಷಿಯಾ ಫೆಸಿಫಿಕ್ ರಾಷ್ಟ್ರಗಳಲ್ಲಿ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸುವ ವಿಪ್ರೋ ಇನ್‌ಫೋಟೆಕ್ ಸಂಸ್ಥೆಗೆ ಸತತ ಎರಡನೇ ಬಾರಿ ಪ್ರತಿಷ್ಠಿತ ಸ್ಯಾಪ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಪಾಲುದಾರ ಸಂಸ್ಥೆಯಾದ ವಿಪ್ರೋ ಇನ್‌ಫೋಟೆಕ್ ಬೃಹತ್ ಪಾಲುದಾರ ಸಂಸ್ಥೆಯಾದ ಹಿನ್ನೆಲೆಯಲ್ಲಿ ಸ್ಯಾಪ್ ಪ್ರಶಸ್ತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಯಾಪ್‌ನ ಅಡಳಿತ ಮಂಡಳಿ ಮೇ 19 ಹಾಗೂ 21ರಂದು ಆಯೋಜಿಸಿದ ಗ್ರಾಹಕ ಸಮ್ಮೆಳನದಲ್ಲಿ ಸೇವಾದ್ಯತೆ,ಗ್ರಾಹಕರ ತೃಪ್ತಿ,ವಿತರಣಾ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಷ್ಠಿತ ಸ್ಯಾಪ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ವಿಯನ್ನಾದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಸ್ಯಾಪ್ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸರ್ವಿಸ್ ಡೆಲಿವೆರಿ ಬಿಜಿನೆಸ್ ಸಲೂಶನ್ಸ್ ಡಿವಿಜನ್ ಉಪಾಧ್ಯಕ್ಷ ಸಾಯಿರಾಮನ್ ಜಗನ್ನಾಥನ್ , ಸತತ ಎರಡನೇ ಬಾರಿಗೆ ಸ್ಯಾಪ್ ಪ್ರಶಸ್ತಿಯನ್ನು ಪಡೆಯುತ್ತಿರುವುದು ವಿಶೇಷ ಗೌರವವಾಗಿದೆ. ಮಾರುಕಟ್ಟೆಯಲ್ಲಿ ಮುಂಚೂಣಿಯ ಸ್ಥಾನ ಹಾಗೂ ಉನ್ನತ ಸೇವಾದ್ಯತೆ ಹಾಗೂ ವಿತರಣೆಯಲ್ಲಿನ ಕ್ಷಮತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಸ್ಯಾಪ್ ಪ್ರಶಸ್ತಿಯ ಗೌರವ ಪಡೆದ ವಿಪ್ರೋ ಇನ್‌ಫೋಟೆಕ್ ಸಂಸ್ಥೆಗೆ ನಮ್ಮ ಅಭಿನಂದನೆಗಳು ಎಂದು ಸ್ಯಾಪ್‌ನ ಏಷಿಯಾ ಖಂಡದ ಭಾರತ ಉಪಾಧ್ಯಕ್ಷ ದೇಬ್‌ದೀಪ್ ಸೆನ್‌ಗುಪ್ತಾ ಹೇಳಿದ್ದಾರೆ.ಸಂಷೋಧನೆ ಹಾಗೂ ಗ್ರಾಹಕರ ಸೇವೆಗೆ ನೀಡುವ ಆದ್ಯತೆಯಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಹಿವಾಟಿನಲ್ಲಿ ಮುಂಚೂಣಿಯ ಸ್ಥಾನವನ್ನು ಪಡೆದಿದೆ ಎಂದು ಹೇಳಿದ್ದಾರೆ.
|