ನವದೆಹಲಿ : ಜುಲೈ 4 ನೇ ದಿನಾಂಕದವರೆಗೆ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 150 ಡಾಲರ್‌ಗೆ ಏರಿಕೆಯಾಗಲಿದೆ ಎನ್ನುವ ಮೊರ್ಗನ್ ಸ್ಟ್ಯಾನ್ಲೇ ಭವಿಷ್ಯದಂತೆ ದಾಖಲೆಯ ಪ್ರತಿ ಬ್ಯಾರೆಲ್‌ಗೆ 139 ಡಾಲರ್ ಏರಿಕೆಯಾಗಿ ದಿಗ್ಬಮೆ ಮೂಡಿಸಿದೆ.
ತೈಲ ಕೊರತೆಯ ಹಿನ್ನೆಲೆಯಲ್ಲಿ ದರಗಳು ಒಂದೇ ದಿನದಲ್ಲಿ ಶೇ ರಷ್ಟು ಏರಿಕೆಯಾಗಿ ದಾಖಲೆ ಸ್ಥಾಪಿಸಿತು.ಮಧ್ಯಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟಿನಿಂದಾಗಿ ತೈಲದರಗಳು ವೇಗವಾಗಿ ವೃದ್ಧಿಯಾಗುತ್ತಿವೆ ಎಂದು ನೂಯಾರ್ಕ್ ಮರ್‌ಚಂಟೈಲ್ ಎಕ್ಸ್‌ಚೇಂಜ್ ಪ್ರಕಟಿಸಿದೆ.
ನೈಮ್ಯಾಕ್ಸ್‌ನಲ್ಲಿ ಪ್ರತಿ ಬ್ಯಾರೆಲ್ ತೈಲಕ್ಕೆ 138.54 ಡಾಲರ್‌ಗಳ ಏರಿಕೆಯಾಗಿ ನಂತರ ಅಲ್ಪ ಮಟ್ಟಿನ ಜಿಗಿತದೊಂದಿಗೆ 139 ಡಾಲರ್‌ಗೆ ತಲುಪಿದ್ದು, ಹಿಂದಿನ ದಾಖಲೆಯಾದ ಪ್ರತಿ ಬ್ಯಾರೆಲ್‌ಗೆ 135.09 ಡಾಲರ್‌ನ್ನು ಮೀರಿ ಹೆಚ್ಚಳವಾಗಿರುವುದು ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.
|