ತೈಲದರ ಹೆಚ್ಚಳವಾದಂತೆ ದೇಶದ ಹಣದುಬ್ಬರ ಕೂಡಾ ಶೇ 8ಕ್ಕಿಂತ ಹೆಚ್ಚಿಗೆ ಏರಿಕೆಯಾಗುತ್ತಿರುವುದನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲಿ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಆರ್‌ಬಿಐ ಗವರ್ನರ್ ವೈ.ವಿ ರೆಡ್ಡಿ ತಿಳಿಸಿದ್ದಾರೆ.
ಕಳೆದ 12 ತಿಂಗಳಲ್ಲಿ ದೇಶದ ಹಣದುಬ್ಬರ ಶೇ 8.24ರಷ್ಟು ಏರಿಕೆ ಕಂಡಿದ್ದು, ಕಳೆದ ವಾರ ಶೇ 8.10ರಷ್ಟಿದ್ದ ಹಣದುಬ್ಬರ ಶೇ8.29ಕ್ಕೆ ತಲುಪಿದೆ.
ಹಣದುಬ್ಬರ ಏರಿಕೆಯನ್ನು ತಡೆಯಲು ಕೆಲ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮುಂಬೈನ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಆರ್ಥಿಕ ತಜ್ಞೆ ಸುಚಿತ್ರಾ ಮೆಹತಾ ಹೇಳಿದ್ದಾರೆ.
ಮಾರ್ಚ್ 29ಕ್ಕೆ ಅಂತ್ಯಗೊಂಡಂತೆ ಕೆಲ ವಾರಗಳಿಂದ ನಿರಂತರ ಏರಿಕೆಯಾಗುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಬಿಐ ತಿಳಿಸಿದೆ.
|