ಹೈದ್ರಾಬಾದ್ : ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ದರಗಳು ನಿರೀಕ್ಷೆಗಿಂತ ಹೆಚ್ಚಿನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ತೈಲದರವನ್ನು ಹೆಚ್ಚಿಸಿ ಘೋಷಣೆ ಮಾಡಿರುವುದು ಸೂಕ್ತವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ವೈ.ವಿ.ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ತೈಲ ದರ ಏರಿಕೆಯ ಸರಕಾರದ ನಿರ್ಧಾರ ಸೂಕ್ತ ದಿಕ್ಕಿನಲ್ಲಿ ಅಗತ್ಯ ಮಹತ್ವದ ಹೆಜ್ಜೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ದರಗಳು ವೇಗವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ದೇಶಿಯ ತೈಲ ಮಾರುಕಟ್ಟೆ ನಷ್ಟದತ್ತ ಸಾಗುತ್ತಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅಹಾರ ,ಹಣಕಾಸು ಮತ್ತು ತೈಲಗಳ ಮೇಲೆ ಬೀರುವ ಪರಿಣಾಮ ದೇಶದ ಆರ್ಥಿಕತೆಯನ್ನು ಹಿನ್ನೆಡೆಯಾಗಿಸುತ್ತದೆ. ಎಂದು ತಿಳಿಸಿದ್ದಾರೆ.
|