ನವದೆಹಲಿ : ಮೈಕ್ರೋಸಾಫ್ಟ್ ಕಂಪೆನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ನೀಲಮ್ ಧವನ್ ಕಂಪೆನಿಯನ್ನು ತ್ಯಜಿಸಿ ಹ್ಯಾವ್‌ಲೆಟ್ ಪ್ಯಾಕರ್ಡ್ ಕಂಪೆನಿಗೆ ಸೇರ್ಪಡೆಯಾಗಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ನೀಲಮ್ ಧವನ್ ಮೈಕೋಸಾಫ್ಟ್ ಕಂಪೆನಿಗೆ ರಾಜೀನಾಮೆ ನೀಡಿ ಭಾರತದ ಹ್ಯಾವ್‌ಲೆಟ್ ಪ್ಯಾಕರ್ಡ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಎಂದು ಮೈಕ್ರೋಸಾಫ್ಟ್ ಕಂಪೆನಿಯ ಭಾರತದ ಮುಖ್ಯಸ್ಥ ರವಿ ವೆಂಕಟೇಸನ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್ ಕಂಪೆನಿಯನ್ನು ಮುಂಚೂಣಿಯಲ್ಲಿ ತರಲು ನೀಲಮ್ ಧವನ್ ಸಹಕರಿಸಿದ್ದು ಅವರ ರಾಜೀನಾಮೆಯಿಂದ ಉತ್ತಮ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.
ನನ್ನ ವೃತ್ತಿ ಬದುಕಿನಲ್ಲಿ ಮೈಕ್ರೋಸಾಫ್ಟ್ ಕಂಪೆನಿಯ ತಂಡದ ನಾಯಕನಾಗಿ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆಯುವಂತೆ ಶ್ರಮಿಸಿ ಗೌರವವನ್ನು ಪಡೆದಿದ್ದೇನೆ.ಮೈಕ್ರೋಸಾಫ್ಟ್ ಕಂಪೆನಿಯನ್ನು ತ್ಯಜಿಸುವುದು ಕಠಿಣ ನಿರ್ಧಾರವಾಗಿದೆ.ಆದರೆ ಎಚ್.ಪಿ ಕಂಪೆನಿಯಲ್ಲಿ ಹೊಸ ಅವಕಾಶಗಳನ್ನು ನಿರೀಕ್ಷಿಸುತ್ತಿದ್ದೇನೆ.ಇದರಿಂದಾಗಿ ಉಭಯ ಪಾಲುದಾರ ಕಂಪೆನಿಗಳ ಏಳಿಗೆಗಾಗಿ ದುಡಿಯಲು ಅವಕಾಶ ನೀಡುತ್ತಿದೆ ಎಂದು ಹೇಳಿದ್ದಾರೆ.
|