ಪ್ರಸಿದ್ಧ ಕಂಪೆನಿಯಾದ ಜಾಗುರ್ ಆಂಡ್ ಲ್ಯಾಂಡ್ ರೋವರ್ ಕಂಪೆನಿಯ ಗಳಿಕೆಗೆ ಕಾನೂನು ಬದ್ಧವಾದ ಸಮ್ಮತಿ ಕಾರ್ಯಗಳು ಪೂರ್ಣಗೊಳ್ಳವ ಹಂತದಲ್ಲಿದ್ದು, ಟಾಟಾ ಕಂಪೆನಿಯು ಪ್ರಸ್ತುತ ಬ್ರಾಂಡ್‌ಗಳನ್ನು 2009ನೇ ಇಸವಿಗೆ ಭಾರತದಲ್ಲಿ ಇದರ ಕಾರ್ಯವನ್ನು ಆರಂಭಿಸಲಿದೆ. ಆರಂಭಿಕ ಕಾರ್ಯವೆಂಬಂತೆ ಸಂಪೂರ್ಣ ನಿರ್ಮಿತ ಘಟಕ(ಸಿಬಿಯು)ವನ್ನು ತಯಾರಿಸಲಾಗಿದ್ದು, ಸಿಕೆಡಿ ಮಾಡೆಲ್ ಬಗ್ಗೆ ಇರುವ ಯೋಜನೆಯು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳುವುದು ಎಂಬುದಾಗಿ ಬಲ್ಲ ಮೂಲಗಳು ತಿಳಿಸಿವೆ. ಹಾಗಿದ್ದರೂ ಸಿಬಿಯುವಿನ ತೆರಿಗೆಯು 114% ವಾಗಿದ್ದು, ಸಿಕೆಡಿಯ ತೆರಿಗೆಯು 15 ಪ್ರತಿಶತವಾಗಿದೆ. ಜಾಗರ್ ಕಂಪೆನಿಯ ಪ್ರಕಾರ, ಟಾಟಾ ಕಂಪೆನಿಯು ಜಾಗರ್ ಎಕ್ಸ್‌ಎಫ್ ಮಾಡೆಲ್ ತಯಾರಿಸಲಿದ್ದು ಇದು ಮೆರ್ಸಿಡಸ್ ಇ ಕ್ಲಾಸ್ ಮತ್ತು ಬಿಎಂಡಬ್ಲ್ಯು ಶ್ರೇಣಿಯೊಂದಿಗೆ ಸ್ಪರ್ಧೆಗಿಳಿಯಲಿದೆ. ಏಕ್ಸ್‌ಎಫ್ ಸಿಬಿಯು ಮಾಡೆಲ್‌ನೊಂದಿಗೆ ತಯಾರಿಸಿದರೆ ಬೆಲೆಯು ಸುಮಾರು 40 ಲಕ್ಷಗಳಷ್ಟಾಗುವುದು ಎಂದು ಅಂದಾಜಿಸಲಾಗಿದೆ. ಇದೀಗ ಮುಂದಿನ ವರ್ಷ ಯೋಜನೆಯನ್ನು ಪೂರ್ಣಗೊಳಿಸಲು ಟಾಟಾ ಕಂಪೆನಿಯು ಸಿದ್ಧತೆ ನಡೆಸುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಕಂಪೆನಿಯಪ ನ್ಯಾನೋ, ನ್ಯೂ ಇಂಡಿಕಾ ಮತ್ತು ಇಂಡಿಗೋ, ಫಿಯೆಟ್ ಬ್ರಾಂಡ್‌ಗಳಾದ ಗ್ರಾಂಡ್ ಪುಂಟೋ ಮತ್ತಿ ಲಿನೇಆ ಮೊದಲಾದ ಯೋಜನೆಗಳಲ್ಲಿ ತಲ್ಲೀವಾಗಿದೆ ಎಂಬುದಾಗಿ ಕಂಪೆನಿ ಮೂಲಗಳು ತಿಳಿಸಿವೆ.
|