ಸಹಾರ ಇಂಡಿಯಾ ಫಿನಾನ್ಸಿಯಲ್ ಕಾರ್ಪರೇಷನ್ ಲಿಮಿಟೆಡ್ ಸಾರ್ವಜನಿಕ ಠೇವಣಿ ಸ್ವೀಕರಿಸುವುದಕ್ಕೆ ಆರ್‌ಬಿಐ ತಡೆಯೊಡ್ಡಿರುವ ಬೆನ್ನಲ್ಲೇ ಇದೀಗ ಸೆಂಟ್ರಲ್ ಬ್ಯಾಂಕ್ ಪಂಜಾಬ್‌ನಲ್ಲಿರುವ ಎರಡು ನಾನ್-ಬ್ಯಾಂಕಿಂಗ್ ಫಿನಾನ್ಸಿಯಲ್ ಕಂಪೆನಿಗಳು ಸಾರ್ವಜನಿಕ ಠೇವಣಿ ಸ್ವೀಕರಿಸುವುದಕ್ಕೆ ತಡೆಯೊಡ್ಡಿದೆ. ಚಂಡೀಗಢದ ನಾನ್- ಬ್ಯಾಂಕಿಂಗ್ ನಿಗಾ ವಿಭಾಗವು ಹೊರಡಿಸಿದ ಪ್ರಕಟಣೆಯೊಂದರ ಪ್ರಕಾರ ಮೋಗಾ ಡೆಪಾಸಿಟ್ಸ್ ಆಂಡ್ ಅಡ್ವಾನ್ಸೆಸ್ ಲಿಮಿಟೆಡ್ ಮತ್ತು ಡೈಮಂಡ್ ಫಿನ್‌ಕ್ಯಾಪ್ ಲಿಮಿಟೆಡ್ ಎಂಬಿವುಗಳ ವಿರುದ್ಧ ಸೆಂಟ್ರಲ್ ಬ್ಯಾಂಕ್ ತಡೆಯೊಡ್ಡಿದೆ. ಈ ರೀತಿ ಕಾನೂನು ಉಲ್ಲಂಘನೆ ನಡೆಸಿ ಸಾರ್ವಜನಿಕರಿಂದ ನಿಕ್ಷೇಪ ಸ್ವೀಕರಿಸುವ ಕಂಪೆನಿಗಳು ಸೇವಾ ನಿಬಂಧನೆಗಳ ಪ್ರಕಾರ ಮೊತ್ತವನ್ನು ಹಿಂತಿರುಗಿಸ ತಕ್ಕದ್ದು ಎಂಬುದಾಗಿ ಎಪೆಕ್ಸ್ ಬ್ಯಾಂಕ್ ಹೇಳಿಕೆ ನೀಡಿದೆ.
|