ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆನ್ಸೆಕ್ಸ್ 700ಕ್ಕೂ ಅಧಿಕ ಅಂಶಗಳ ಕುಸಿತ  Search similar articles
PTI
ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಹಣದುಬ್ಬರದ ಏರಿಕೆ ಪರಿಣಾಮವಾಗಿ ಶೇರು ಮಾರುಕಟ್ಟೆಯ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 700ಕ್ಕಿಂತಲೂ ಅಧಿಕ ಅಂಕಗಳ ಇಳಿಕೆಯಾಗಿದೆ.

ಶೇರುಪೇಟೆಯಲ್ಲಿ ವಹಿವಾಟು ಆರಂಭವಾಗತ್ತಲೇ, ಬೃಹತ್ ಕಂಪೆನಿಗಳ ಶೇರುಗಳು ಮಾರಾಟದ ಭರಾಟೆ ಆರಂಭವಾಗಿದ್ದು, ಶೇರು ಸಂವೇದಿ ಸೂಚ್ಯಂಕವು ಪಾತಾಳ ಮುಖಿಯಾಗುತ್ತಿದ್ದು, 15,000ಅಂಕಗಳಿಗಿಂತ ಕೆಳಗಿಳಿದಿದೆ.

ಕಚ್ಚಾ ತೈಲಬೆಲೆ ಏರಿಕೆಯು ಜಾಗತಿಕ ಶೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು, ಈ ದುರ್ಬಲ ಪ್ರವೃತ್ತಿಯು ಮುಂಬೈ ಶೇರು ಮಾರುಕಟ್ಟೆಯ ಮೇಲೆಯೂ ನೇರ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಶುಕ್ರವಾರದ ವಹಿವಾಟಿನಲ್ಲಿ ಕಚ್ಚಾತೈಲದ ಬೆಲೆಯು 139.12 ಡಾಲ‌ರ್‌ಗಳಿಗೇರಿದೆ. ಇದಲ್ಲದೆ ಅಮೆರಿಕದ ಆರ್ಥಿಕ ಹಿಂಜರಿತ ಮತ್ತು ಅಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯೂ ಶೇರು ವ್ಯವಹಾರದ ಮೇಲೆ ಪರಿಣಾಮ ಬೀರಿದೆ.

ಅಮೆರಿಕದ ಶೇರು ಮಾರುಕಟ್ಟೆಯೂ ದುರ್ಬಲ ವಹಿವಾಟು ದಾಖಲಿಸಿವೆ. ಅಂತೆಯೆ, ಏಷ್ಯಾ, ಸಿಂಗಾಪುರ ಮತ್ತು ಜಪಾನ್‌ಗಳ ಮಾರುಕಟ್ಟೆಗಳು ಆರಂಭಿಕ ವ್ಯವಹಾರಗಳಲ್ಲಿ ಶೇ.2 ಅಂಕಗಳ ಕುಸಿತ ಕಂಡಿವೆ.
ಮತ್ತಷ್ಟು
ಸಹಾರಾ: ಸಾರ್ವಜನಿಕ ಠೇವಣಿ ಸ್ವೀಕಾರಕ್ಕೆ ತಡೆ
ಜಾಗುರ್ ಆಂಡ್ ಲ್ಯಾಂಡ್ ರೋವರ್ ಆರಂಭಕ್ಕೆ ಸಿದ್ದತೆ
ಅಭಿವೃದ್ಧಿ ದರದಲ್ಲಿ ಶೇ 8ರ ಸಾಧ್ಯತೆ : ರಂಗರಾಜನ್
ನೀಲಮ್ ಧವನ್ ಹ್ಯಾವ್‌ಲೆಟ್-ಪ್ಯಾಕರ್ಡ್ ಸೇರ್ಪಡೆ
ತೈಲದರ ಹೆಚ್ಚಳ ಅಗತ್ಯ ನಿರ್ಧಾರ-ಆರ್‌ಬಿಐ
ಹಣದುಬ್ಬರ ತಡೆಗೆ ಆರ್‌ಬಿಐ ಸೂಕ್ತ ಕ್ರಮ