ಟೆಲಿಕಾಂ ವಲಯದಲ್ಲಿ ಪೈಪೋಟಿಯನ್ನು ಎದುರಿಸುವುದಕ್ಕೆ ಸಿದ್ಧವಾಗಿರುವ ಬಿಎಸ್ಎನ್ಎಲ್ ಎಸ್‌ಟಿಡಿ ದರಗಳಲ್ಲಿ ಶೇ 50ರಷ್ಟನ್ನು ಕಡಿತಗೊಳಿಸಿ ಗ್ರಾಹಕರ ಸಂತಸದ ಸುದ್ದಿಯನ್ನು ತಂದಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಬಿಎಸ್ಎನ್‌ಎಲ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಕುಲದೀಪ್ ಗೋಯಲ್ ಅವರು ಬಿಎಸ್ಎನ್ಎಲ್ ಎಸ್‌ಟಿಡಿ ದರಗಳಲ್ಲಿ ಶೇ 50 ರಷ್ಟು ದರ ಕಡಿತವನ್ನು ನಾಳೆ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪರಿಷ್ಕೃತ ದರ ಪಟ್ಟಿಯನ್ನು ಜಾರಿಗೆ ತಂದಿದೆ.
ಪರಿಷ್ಕೃತ ದರ ಪಟ್ಟಿಯ ಪ್ರಕಾರ ಇನ್ನು ಮುಂದೆ ಪ್ರತಿ ನಿಮಿಷಕ್ಕೆ 1.20 ರೂ.ಪೈ ನಿಗದಿಯಾಗಿದೆ. ಇದಕ್ಕೂ ಮುನ್ನ ಪ್ರತಿ ನಿಮಿಷದ ಎಸ್‌ಟಿಡಿ ಕರೆಗೆ 2.40 ರೂ.ಪೈ ವೆಚ್ಚವಾಗುತ್ತಿತ್ತು ಎಂದವರು ಹೇಳಿದ್ದಾರೆ.
ಇದಕ್ಕೂ ಮುನ್ನ ಮಹಾನಗರ ಟೆಲಿಫೋನ್ ನಿಗಮ ಎಸ್‌ಟಿಡಿ ದರಗಳನ್ನು ಕಡಿತಗೊಳಿಸಿದೆ. ಎಂಟಿಎನ್ಎಲ್ ಪರಿಷ್ಕೃತಗೊಳಿಸಿರುವ ದರ ಪಟ್ಟಿಯು ಎರಡು ರೂನಿಂದ 1.20 ರೂ.ಪೈಗೆ ನಿಗದಿಯಾಗಿದೆ.
|