ಸಹಾರಾ ಇಂಡಿಯಾ ಫೈನಾನ್ಶಿಯಲ್ ಕಾರ್ಪೋರೆಷನ್ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡಿದ್ದ ಕ್ರಮಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಹೊಸ ಠೇವಣಿ ಸ್ವೀಕರಿಸದಂತೆ ಆರ್‍ಬಿಐ ನೀಡಿರುವ ನಿರ್ದೇಶನದ ವಿರುದ್ಧ ಹೊಸತಾಗಿ ಮನವಿ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ.
ಸಹಾರಾ ಇಂಡಿಯಾ ವಿರುದ್ಧ ರಿಸರ್ವ್ ಬ್ಯಾಂಕ್ ಬ್ಯಾಂಕ್ ತೆಗೆದುಕೊಂಡ ಕ್ರಮಗಳಿಗೆ ಅಲಹಾಬಾದ್‌ನ ಹೈಕೋರ್ಟ್‌ನ ಲಖ್ನೋ ವಿಭಾಗೀಯ ಪೀಠವು ನೀಡಿದ್ದ ಮಧ್ಯಂತರ ತಡೆಯಾಜ್ಞೆಯ ತೀರ್ಪು ಜಾರಿಯಲ್ಲಿ ಇರುವುದಿಲ್ಲ ಎಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಪಿ.ಪಿ. ನವಲೆಕರ್ ಅವರನ್ನು ಒಳಗೊಂಡ ವಿಭಾಗೀಯ ತೀರ್ಪಿನಲ್ಲಿ ಹೇಳಿದೆ.
ಆರ್‌ಬಿಐ ಹೊಸತಗಾಗಿ ಮನವಿ ಸಲ್ಲಿಸುವವರೆಗೆ ಜೂನ್ ನಾಲ್ಕರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ್ದ ಸೂಚನೆಗಳು ಜಾರಿಗೆ ಬರುವುದಿಲ್ಲ. ಇದೇ ಸಂದರ್ಭದಲ್ಲಿ ಸಹಾರಾ ಇಂಡಿಯಾ ಪರವಾಗಿ ಉಚ್ಚನ್ಯಾಯಾಲಯ ನೀಡಿದ ಮಧ್ಯಂತರ ತಿರ್ಪು ಜಾರಿಯಲ್ಲಿ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಹೇಳಿದೆ.
|