ಭಾರತದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡುವ ಸಂಸ್ಥೆಗಳ ಮೇಲೆ ತೆರಿಗೆಯನ್ನು ಪಾವತಿ ಮಾಡಬೇಕು ಎಂದು ಆದಾಯ ತೆರಿಗೆ ಆಯುಕ್ತರು ಆದೇಶ ನೀಡಿದ್ದಾರೆ.
ತಾನು ಪ್ರಸಾರ ಮಾಡುವ ಕ್ರಿಕೆಟ್ ಪಂದ್ಯಗಳಿಗೆ ತೆರಿಗೆ ಅನ್ವಯವಾಗುವುದಿಲ್ಲ ಎಂದು ನಿಂಬಸ್ ಕ್ರೀಡಾ ಟಿವಿ ಚಾನೆಲ್ ಸಲ್ಲಿಸಿದ್ದ ಮನವಿ ಅರ್ಜಿಯನ್ನು ತೀರಸ್ಕರಿಸಿದ ಆದಾಯ ತೆರಿಗೆ ಆಯುಕ್ತರು ಮೇಲಿನಂತೆ ತೀರ್ಪು ನೀಡಿದ್ದಾರೆ.
ಆದಾಯ ತೆರಿಗೆ ಆಯುಕ್ತರು ನೀಡಿರುವ ತೀರ್ಪನ್ನು ಸಿಂಗಪೂರ್ ಮೂಲದ ವರ್ಲ್ಡ್ ಸ್ಪೋರ್ಟ್ಸ್ ನಿಂಬಸ್ ಆದಾಯ ತೆರಿಗೆ ಮೇಲ್ವಿಚಾರಣಾ ನ್ಯಾಯಾಧಿಕರಣಕ್ಕೆ ವಿದೇಶಿ ಮೂಲದ ಕಂಪನಿಗಳ ಮೇಲೆ ಆದಾಯ ತೆರಿಗೆ ಅನ್ವಯವಾಗುವುದಿಲ್ಲ ಎನ್ನುವ ಆಧಾರದ ಮೇಲೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ.
ಭಾರತದಲ್ಲಿ ನಡೆದ 2002ರಿಂದ 2005ರವರೆಗೆ ನಡೆದ ಕ್ರಿಕೆಟ್ ಪಂದ್ಯಗಳನ್ನು ಜಾಗತಿಕ ಮಟ್ಟದಲ್ಲಿ ನೇರ ಪ್ರಸಾರ ಮಾಡಿದ ನಿಂಬಸ್ ಸಂಸ್ಥೆಯು ಆರು ಕೋಟಿ ರೂಗಳನ್ನು ಆದಾಯ ತೆರಿಗೆ ರೂಪದಲ್ಲಿ ಪಾವತಿ ಮಾಡಬೇಕು ಎಂದು ಆದಾಯ ತೆರಿಗೆ ನಿಂಬಸ್ ಸಂಸ್ಥೆಗೆ ಹೇಳಿತ್ತು.
|