ಮೇ ತಿಂಗಳ ಅವಧಿಯಲ್ಲಿ ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಶೇ 14.26ರಷ್ಟು ಹೆಚ್ಚಳ ಕಂಡು ಬಂದಿದ್ದು ಈ ಅವಧಿಯಲ್ಲಿ 1,10,743 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 96,923. ಪ್ರಯಾಣಿಕ ಕಾರುಗಳು ಮಾರಾಟವಾಗಿದ್ದವು.
ಸೊಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫಾಕ್ಚರರ್ಸ್ ಅಸೋಸಿಯೆಷನ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ದೇಶದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 7-39ರಷ್ಟು ಹೆಚ್ಚಳವಾಗಿದ್ದು, ಮೇ ತಿಂಗಳಿನಲ್ಲಿ 5,13,209 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ 4,77,901 ವಾಹನಗಳು ಮಾರುಕಟ್ಟೆಗೆ ಬಿಡುಗಡೆಯಾಗಿದ್ದವು.
ಮೇ ತಿಂಗಳಿನಲ್ಲಿ ಒಟ್ಟು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರತಿಶತ 6.99 ರ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದಲ್ಲಿ ಒಟ್ಟಾರೆ 42344 ದ್ವಿಚಕ್ರ ವಾಹನಗಳ ಹೆಚ್ಚಿಗೆ ಮಾರಾಟವಾಗಿವೆ.
ವಾಣಿಜ್ಯೋದ್ದೇಶದ ವಾಹನಗಳ ಮಾರಾಟದಲ್ಲಿ ಶೇ 6.11ರಷ್ಟು ಹೆಚ್ಚಳ ಕಂಡು ಬಂದಿದ್ದು, ವಾಣಿಜ್ಯೋದ್ದೇಶದ ವಾಹನಗಳ ಮಾರಾಟವು 33,262ರಿಂದ 35,294ಕ್ಕೆ ಏರಿದೆ.
|