ಯುಪಿಎ ಸರಕಾರದ ರೈತರ ಸಾಲ ಮನ್ನಾ ಯೋಜನೆಯನ್ನು ಪ್ರಾರಂಭಗೊಳಿಸುವ ನಿಟ್ಟಿನಲ್ಲಿ, ಅರ್ಹ ರೈತರ ಪಟ್ಟಿಯನ್ನು ಜೂನ್ 20ರೊಳಗೆ ಸಲ್ಲಿಸುವಂತೆ ಕೇಂದ್ರದ 71,000 ಕೋಟಿ ಸಾಲ ಮನ್ನಾ ಯೋಜನೆಯಲ್ಲಿ ಒಳಗೊಂಡಿರುವ ಎಲ್ಲಾ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮನವಿ ಮಾಡಿದೆ.
ಈ ಕುರಿತಾಗಿ ಎಲ್ಲಾ ಬ್ಯಾಂಕಿನ ಅಧಿಕಾರಿಗಳು ತಮ್ಮ ಶಾಖೆಗೆ ಸಂಬಂಧಪಟ್ಟ ಪ್ರದೇಶಗಳಲ್ಲಿನ ಸಾಲ ಮನ್ನಾ ಯೋಜನೆಗೆ ಅರ್ಹರಾಗುವ ರೈತರ ಪಟ್ಟಿಯನ್ನು ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಹಿರಿಯ ಆರ್‌ಬಿಐ ಅಧಿಕಾರಿಗಳು ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ಕೇಂದ್ರ ಯುಪಿಎ ಸರಕಾರದ ಈ ಮಹತ್ವದ ಸಾಲಮನ್ನಾ ಯೋಜನೆಯು ಜೂನ್ 30ರಂದು ಕೊನೆಗೊಳ್ಳುವ ನಿರೀಕ್ಷೆಯಿದೆ.
ಈ ಮೊದಲು, ಸಾಲಮನ್ನಾ ಯೋಜನೆಯ ಕಾರ್ಯಗತಕ್ಕಾಗಿ ಬ್ಯಾಂಕುಗಳು ಹಿರಿಯ ಅಧಿಕಾರಿಗಳನ್ನು ನೇಮಕ ಮಾಡುವುದರೊಂದಿಗೆ, ಸಾಲ ಮನ್ನಾ ಯೋಜನೆಯ ವಿವರಗಳನ್ನು ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸುವಂತೆ ಸರಕಾರಿ ನಿಯಂತ್ರಿತ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಮುಂಬಯಿನಲ್ಲಿ ನಡೆಸಿದ್ದ ಸಭೆಯಲ್ಲಿ ಹಣಕಾಸು ಸಚಿವ ಚಿದಂಬರಂ ಅವರು ತಿಳಿಸಿದ್ದರು.
ಕ್ರಮವಾಗಿ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳ ಮೂಲಕ ಈ ಕಾರ್ಯಗತದ ಉಸ್ತುವಾರಿಯನ್ನು ಬ್ಯಾಂಕಿಂಗ್ ನಿಯಂತ್ರಕ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ವಹಿಸಿಕೊಳ್ಳಲಿದೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.
|