ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ಸಂಸ್ಥೆಗಳಿಗೆ 1.5 ಬಿಲಿಯನ್ ನಷ್ಟ  Search similar articles
ವಿಮಾನ ಇಂಧನದ ಬೆಲೆಯಲ್ಲಿನ ತೀವ್ರ ಪ್ರಮಾಣದ ಏರಿಕೆಯಿಂದಾಗಿ ಭಾರತದ ಅತಿ ದೊಡ್ಡ ಪ್ರಾದೇಶಿಕ ಏರ್‌ಲೈನ್ ಸಂಸ್ಥೆ ಜೆಟ್ ಏರ್‌ವೇಯ್ಸ್ ಮತ್ತು ಇತರ ಏರ್‌ಲೈನ್ ಕಂಪನಿಗಳು ಪ್ರಸಕ್ತ ವರ್ಷದಲ್ಲಿ ಸುಮಾರು 1.5 ಶತಕೋಟಿ ಡಾಲರ್ ನಷ್ಟವನ್ನು ಹೊಂದುವ ಸಾಧ್ಯತೆಯಿದ್ದು, ಇದು ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

ಏರ್‌ಲೈನ್ ತನ್ನ ಕೆಲವು ಮಾರ್ಗಗಳನ್ನು ಕಡಿತಗೊಳಿಸಲಿದೆ ಮತ್ತು ನೂತನವಾಗಿ ಪ್ರಾರಂಭಗೊಳ್ಳಲಿರುವ ವಿಮಾನಗಳನ್ನು ಪ್ರಾರಂಭವನ್ನು ಮುಂದೂಡಲಿಗೆ ಎಂದು ಏಶಿಯಾ ಫೆಸಿಫಿಕ್ ವಿಮಾನಯಾನ ಕೇಂದ್ರದ ಸ್ಥಳೀಯ ಕೇಂದ್ರ ಸಿಇಒ ಕಪಿಲ್ ಕೌಲ್ ತಿಳಿಸಿದ್ದಾರೆ.

ಪ್ರಾದೇಶಿಕ ಇಂಧನ ಬೆಲೆಯಲ್ಲಿ ಶೇ.53 ವರ್ಧನೆಯು ಭಾರತೀಯ ವಿಮಾನ ಸಂಸ್ಥೆಗಳಿಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದ್ದು, ಇದು ಪ್ರಯಾಣಿಕರ ಸಂಖ್ಯೆಯಲ್ಲಿನ ಇಳಿಕೆಯ ಸಾಧ್ಯತೆಯನ್ನು ಉಂಟುಮಾಡುತ್ತದೆ ಎಂದು ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಮುಂದಿನ ಎರಡು ವರ್ಷಗಳಲ್ಲಿ ಪರಿಸ್ಥಿತಿಯು ಇನ್ನೂ ಗಂಭೀರಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಕಚ್ಛಾತೈಲ ಬೆಲೆಯು ಬ್ಯಾರಲಿಗೆ 150 ಡಾಲರ್ ತಲುಪಿದಲ್ಲಿ ಈ ಕುರಿತಾಗಿ ಯಾರೂ ಏನು ಕೇಳುವಂತಿಲ್ಲ. ದೇಶದ ಅತಿ ದೊಡ್ಡ ತೈಲ ಶುದ್ಧೀಕರಣ ಸಂಸ್ಥೆ ಇಂಡಿಯನ್ ಆಯಿಲ್ ತನ್ನ ಇಂಧನ ಬೆಲೆಯನ್ನು ಏರಿಸಿದ ನಂತರ ಇಂಧನ ಬೆಲೆಯಲ್ಲಿ ಏರಿಕೆ ಉಂಟಾಗಿದೆ. ಜನವರಿ ತಿಂಗಳಲ್ಲಿ ಪ್ರತಿ ಕಿಲೋಲೀಟರ್‌ಗೆ 47,045 ರೂಪಾಯಿಯಷ್ಟಿದ್ದ ಜೆಟ್ ಇಂಧನವು ಪ್ರಸಕ್ತ 71,759ಕ್ಕೆ ಏರಿದೆ ಎಂದು ಇಂಡಿಯನ್ ಆಯಿಲ್ ವೆಬ್‌ಸೈಟ್ ಹೇಳಿದೆ.
ಮತ್ತಷ್ಟು
ಅರ್ಹ ರೈತರ ಪಟ್ಟಿ ನೀಡಲು ಬ್ಯಾಂಕ್ ಅಧಿಕಾರಿಗಳಿಗೆ ಮನವಿ
ಕಾರು, ಬೈಕುಗಳ ಮಾರಾಟದಲ್ಲಿ ಹೆಚ್ಚಳ
ಕ್ರಿಕೆಟ್ ನೇರ ಪ್ರಸಾರ ಸಂಸ್ಥೆಗಳಿಗೆ ತೆರಿಗೆ
ಬ್ರಿಟಿಷರಿಗೆ ಉದ್ಯೋಗ ಭರವಸೆ: ಟಾಟಾ
ಶೇ 8.5ರಷ್ಟು ಆರ್ಥಿಕಾಭಿವೃದ್ದಿ: ಚಿದಂಬರಂ
ಸಹಾರಾ ಪರ ನೀಡಿದ್ದ ಮಧ್ಯಂತರ ತೀರ್ಪು ರದ್ದು