ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾರತದ ಅಭಿವೃದ್ಧಿ ಕುಂಠಿತಗೊಳ್ಳಲಿದೆ: ವಿಶ್ವಬ್ಯಾಂಕ್  Search similar articles
ಕೈಗಾರಿಕಾ ಉತ್ಪನ್ನಗಳ ಬೇಡಿಕೆಯಲ್ಲಿನ ಹಿಂಜಿರಿತ ಮತ್ತು ಹಣಕಾಸು ಬಿಗಿ ನೀತಿಯಿಂದಾಗಿ 2008ರ ಅವಧಿಯಲ್ಲಿ ಭಾರತದ ಆರ್ಥಿಕ ಅಬಿವೃದ್ಧಿಯು ಶೇ.ಏಳಕ್ಕೆ ಇಳಿಕೆಗೊಳ್ಳಲಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

2006ರಲ್ಲಿ ಶೇ.9.7ರಷ್ಟಿದ್ದ ಜಿಡಿಪಿ ಅಭಿವೃದ್ಧಿಯು 2007ರಲ್ಲಿ ಶೇ.8.7ಕ್ಕೆ ಇಳಿಮುಖಗೊಂಡಿತ್ತು. 2008ರಲ್ಲಿ ಇದು ಇನ್ನಷ್ಟು ಇಳಿಕೆಗೊಳ್ಳುವ ಮೂಲಕ ಶೇ.7ಕ್ಕೆ ಇಳಿಯಲಿದೆ ಎಂದು ಜಾಗತಿಕ ಹಣಕಾಸು ಅಭಿವೃದ್ಧಿಯ ಕುರಿತಾದ ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿದ ವರದಿಗಳು ತಿಳಿಸಿವೆ.

ಕಳೆದ ವರ್ಷದ ಬಿಗಿ ಹಣಕಾಸು ನೀತಿಯಂದ ಪ್ರಾದೇಶಿಕ ಬೇಡಿಕೆಯಲ್ಲಿನ ಮಂದತೆಯು ಜಿಡಿಪಿ ಇಳಿಕೆಗೆ ಕಾರಣವಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ನಿರ್ಬಂಧ ಕ್ರಮಗಳು ಹಣದುಬ್ಬರ ಏರಿಕೆಯನ್ನು ತಪ್ಪಿಸಲು ಸಹಾಯವಾದರೂ, ರೂಪಾಯಿ ಮೌಲ್ಯ ವರ್ಧನೆಗೊಂಡ ಕಾರಣ ರಫ್ತುದಾರರಿಗೆ ನಷ್ಟ ಉಂಟಾಗಿದೆ ಎಂದು ಈ ವರದಿಗಳು ತಿಳಿಸಿವೆ.

ಏನೇ ಆದರೂ, ವೇತನ ಹೆಚ್ಚಳ ಮತ್ತು ಬ್ರಹತ್ ಹಣಕಾಸು ಹರಿವಿನಿಂದಾಗಿ ಅನುಬೋಗ ದರದಲ್ಲಿ ಇಳಿಮುಖ ಉಂಟಾಗಿಲ್ಲ ಎಂದು ಈ ವರದಿಗಳು ಸ್ಪಷ್ಟಪಡಿಸಿವೆ.
ಮತ್ತಷ್ಟು
ವಿಮಾನ ಸಂಸ್ಥೆಗಳಿಗೆ 1.5 ಬಿಲಿಯನ್ ನಷ್ಟ
ಅರ್ಹ ರೈತರ ಪಟ್ಟಿ ನೀಡಲು ಬ್ಯಾಂಕ್ ಅಧಿಕಾರಿಗಳಿಗೆ ಮನವಿ
ಕಾರು, ಬೈಕುಗಳ ಮಾರಾಟದಲ್ಲಿ ಹೆಚ್ಚಳ
ಕ್ರಿಕೆಟ್ ನೇರ ಪ್ರಸಾರ ಸಂಸ್ಥೆಗಳಿಗೆ ತೆರಿಗೆ
ಬ್ರಿಟಿಷರಿಗೆ ಉದ್ಯೋಗ ಭರವಸೆ: ಟಾಟಾ
ಶೇ 8.5ರಷ್ಟು ಆರ್ಥಿಕಾಭಿವೃದ್ದಿ: ಚಿದಂಬರಂ