ಶೇರು ಮಾರುಕಟ್ಟೆಯ ದೃಢತೆಯಿಂದಾಗಿ ಮತ್ತು ಬ್ಯಾಂಕುಗಳಿಂದ ಅಮೆರಿಕ ಕರೆನ್ಸಿಯ ಮಂದ ಮಾರಾಟದಿಂದಾಗಿ ಬುಧವಾರದ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ವರ್ಧನೆಗೊಂಡಿದೆ.
ಕಳೆದ ವಹಿವಾಟಿನಲ್ಲಿ 42.96/97ಕ್ಕೆ ವಹಿವಾಟು ನಡೆಸಿದ್ದ ವಿದೇಶಿ ವಿನಿಮಯ ಮಾರುಕಟ್ಟೆಯ ಬುಧವಾರದ ವಹಿವಾಟಿನಲ್ಲಿ ರೂಪಾಯಿಯು 42.94/96ಕ್ಕೆ ವಹಿವಾಟನ್ನು ಪ್ರಾರಂಭಿಸಿತ್ತು.
ನಂತರ ಬ್ಯಾಂಕ್ ಮತ್ತು ಕಾರ್ಪೋರೇಟ್‌ಗಳಿಂದ ಡಾಲರ್ ಮಾರಾಟದಿಂದಾಗಿ ರೂಪಾಯಿ ಮೌಲ್ಯವು 42.92/93ಕ್ಕೆ ಏರಿತು.
ಮುಂಬಯಿ ಶೇರು ಮಾರುಕಟ್ಟೆಯ ವರ್ಧನೆಯು ಕೂಡಾ ರೂಪಾಯಿ ಮೌಲ್ಯ ಏರಿಕೆಗೆ ಪುಷ್ಠಿ ನೀಡಿತ್ತು ಎಂದು ಫಾರೆಕ್ಸ್ ಮೂಲಗಳು ತಿಳಿಸಿವೆ.
|