ದೇಶದಲ್ಲಿನ ರಸಗೊಬ್ಬರ ಬಳಕೆಯಲ್ಲಿ ಹೆಚ್ಚಳ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸ್ಥಗಿತಗೊಂಡಿರುವ ಯೂರಿಯಾ ನಿರ್ಮಾಣಕೇಂದ್ರವನ್ನು ಪುನರ್ ಸ್ಥಾಪಿಸಲು ಸರಕಾರವು ನಿರ್ಧರಿಸಿರುವುದಾಗಿ ಕೇಂದ್ರ ಸಚಿವ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಉತ್ತರ ಪ್ರದೇಶ, ಜಾರ್ಖಂಡ್, ಒರಿಸ್ಸಾ, ಬಿಹಾರ ಮತ್ತು ಪಶ್ಚಿಮ ಬಂಗಾಲದಲ್ಲಿ ಎಂಟು ನಾಫ್ತಾ ಆಧಾರಿತ ಯೂರಿಯಾ ಸ್ಥಾವರವನ್ನು ಸ್ಥಾಪಿಸಲು ಸರಕಾರವು ನಿರ್ಧರಿಸಿದೆ ಎಂದು ರಾಸಾಯನಿಕ ರಸಗೊಬ್ಬರ ಮತ್ತು ಸ್ಟೀಲ್ ಸಚಿವ ರಾಂ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ರಸದೊಬ್ಬರ ಬಳಕೆಯ ಪ್ರಮಾಣವು 250 ಲಕ್ಷ ಟನ್‌ಗಳಷ್ಟಿದ್ದು, ಈ ಮೊದಲು ಇದರ ಪ್ರಮಾಣವು 230 ಲಕ್ಷ ಟನ್‌ಗಳಷ್ಟಾಗಿತ್ತು. ಅಲ್ಲದೆ, ಮುಂದಿನ ಐದು ವರ್ಷಗಳೊಳಗೆ ಇದರ ಪ್ರಮಾಣವು 300 ಲಕ್ಷ ಟನ್‌ಗಳಿಗೆ ಏರುವ ನಿರೀಕ್ಷೆಯನ್ನು ಸರಕಾರವು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರವು ರೈತರಿಗೆ ಒಂದು ಲಕ್ಷ ಕೋಟಿ ಸಹಾಯಧನವನ್ನು ನೀಡುತ್ತಿದ್ದು, ಪ್ರತಿ ಟನ್‌ಗೆ 26,000ರೂಪಾಯಿ ಯೂರಿಯಾವನ್ನು ರೈತರಿಗೆ 4,830 ರೂಪಾಯಿಗಳಲ್ಲಿ ಒದಗಿಸುತ್ತಿದ್ದೇವೆ ಎಂದು ಪಾಸ್ವಾನ್ ಸ್ಪಷ್ಟಪಡಿಸಿದರು.
|