ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೇಪೋ ದರ ಏರಿಕೆ: ದುಬಾರಿಯಾದ ಸಾಲ  Search similar articles
PTIPTI
ಹಣದುಬ್ಬರ ಏರಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಿರು ಹಂತದ ಸಾಲ ದರವನ್ನು ಶೇ.0.25ರಷ್ಟು ಏರಿಸಿರುವುದರ ಪರಿಣಾಮವಾಗಿ ಗ್ರಾಹಕ, ಗೃಹ, ಆಟೋ ಮತ್ತು ಇತರ ಸಾಲಗಳ ಬಡ್ಡಿದರವು ಹೆಚ್ಚಳವಾಗುವ ಸಾಧ್ಯತೆಯಿದೆ.

ರೇಪೋ ದರವನ್ನು ಶೇ.7.75ರಿಂಗ ಶೇ.ಎಂಟಕ್ಕೆ ಏರಿಸಿರುವುದಾಗಿ ಬುಧವಾರ ಕೇಂದ್ರ ಬ್ಯಾಂಕ್ ಘೋಷಿಸಿದ್ದು, ಹಣದುಬ್ಬರವು ಆತಂಕಕಾರಿ ರೀತಿಯಲ್ಲಿ ಏರಿಕೆಗೊಂಡಿರುವ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಪೆಟ್ರೋಲಿಯಂ ಬೆಲೆಯಲ್ಲಿನ ಏರಿಕೆಯು ಅಧಿಕೃತ ಸಗಟು ಬೆಲೆ ಇಂಡೆಕ್ಸ್‌ನಲ್ಲಿ ಪ್ರತಿಬಿಂಬಿಸುವ ಕಾರಣ ಹಣದುಬ್ಬರ ದರವು ಶೇ.ಒಂಬತ್ತರಷ್ಟು ಏರಿಕೆಗೊಳ್ಳುವ ನಿರೀಕ್ಷೆ ಇದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ರೇಪೋ ದರ ಏರಿಕೆಯ ನಿರ್ಧಾರವು ಈ ಹಣಕಾಸು ವರ್ಷದಲ್ಲಿ ಪ್ರಥಮ ಬಾರಿಗೆ ತೆಗೆದುಕೊಳ್ಳಲಾಗಿದೆ .

ರಿಸರ್ವ್ ಬ್ಯಾಂಕಿನ ರೇಪೋ ದರ ಏರಿಕೆಯು ಬ್ಯಾಂಕುಗಳ ಸಾಲ ದರದಲ್ಲಿ ತೊಡಕನ್ನುಂಟುಮಾಡುತ್ತದೆ. ಬ್ಯಾಂಕುಗಳ ಪ್ರಾಥಮಿಕ ಸಾಲ ದರದಲ್ಲೂ ಏರಿಕೆ ಉಂಟಾಗಲಿದೆ.

ಅಲ್ಲದೆ, ಬ್ಯಾಂಕುಗಳ ಠೇವಣಿ ದರದಲ್ಲೂ ಪರಿಷ್ಕರಣೆ ಉಂಟಾಗಲಿದೆ ಎಂದು ಎಚ್‌‌‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಆರ್ಥಿಕತಜ್ಞ ಅಬೀಕ್ ಬರುವಾ ರೇಪೋ ದರ ಏರಿಕೆಯ ಕುರಿತು ಪ್ರತಿಕ್ರಯಿಸಿದ್ದಾರೆ.
ಮತ್ತಷ್ಟು
ಹಣದುಬ್ಬರ ಮಂದಗೊಳ್ಳಲಿದೆ:ಆರ್ಥಿಕ ತಜ್ಞರು
8 ಯೂರಿಯಾ ಕೇಂದ್ರ ಮರುಸ್ಥಾಪನೆ: ಪಾಸ್ವಾನ್
ರೂಪಾಯಿ ಮೌಲ್ಯ ವರ್ಧನೆ
ಬಾರತದ ಅಭಿವೃದ್ಧಿ ಕುಂಠಿತಗೊಳ್ಳಲಿದೆ: ವಿಶ್ವಬ್ಯಾಂಕ್
ವಿಮಾನ ಸಂಸ್ಥೆಗಳಿಗೆ 1.5 ಬಿಲಿಯನ್ ನಷ್ಟ
ಅರ್ಹ ರೈತರ ಪಟ್ಟಿ ನೀಡಲು ಬ್ಯಾಂಕ್ ಅಧಿಕಾರಿಗಳಿಗೆ ಮನವಿ