ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
4 ಪೈಸೆಯಷ್ಟು ಏರಿದ ರೂಪಾಯಿ ಮೌಲ್ಯ  Search similar articles
PTIPTI
ಹಣದುಬ್ಬರ ಏರಿಕೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರವನ್ನು ಶೇ.0.25ನಷ್ಟು ಏರಿಸಿದ ನಂತರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ಗುರುವಾರದ ವಹಿವಾಟಿನಲ್ಲಿ ನಾಲ್ಕು ಪೈಸೆಯಷ್ಟು ವರ್ಧನೆಗೊಂಡಿದೆ.

ಫಾರೆಕ್ಸ್ ಮಾರುಕಟ್ಟೆಯಲ್ಲಿ ಕಳೆದ ವಹಿವಾಟಿನಲ್ಲಿ 42.86/87ರಷ್ಟು ಮೌಲ್ಯವನ್ನು ಹೊಂದಿದ್ದ ರೂಪಾಯಿಯು ಗುರುವಾರದ ವಹಿವಾಟಿನಲ್ಲಿ 42/75/77ರಲ್ಲಿ ವಹಿವಾಟನ್ನು ಪ್ರಾರಂಭಿಸಿ, ಪ್ರಸಕ್ತ 42.8150/8250ರಲ್ಲಿ ವಹಿವಾಟು ನಡೆಸುತ್ತಿದೆ.

ರಫ್ತುದಾರರ ಅಧಿಕ ಮಟ್ಟದ ಮಾರಾಟ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ರೇಪೋ ದರ ಹೆಚ್ಚಳವು ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಪುಷ್ಠಿ ನೀಡಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಆದರೂ, ಜಾಗತಿಕ ಕಚ್ಛಾತೈಲ ಬೆಲೆಯು ಪ್ರತಿ ಬ್ಯಾರಲ್‌ಗೆ 138 ಡಾಲರ್ ತಲುಪಿದ ಪರಿಣಾಮವಾಗಿ ತೈಲ ಶುದ್ಧೀಕರಣ ಕೇಂದ್ರಗಳಿಂದ ಡಾಲರ್‌ಗೆ ಬೇಡಿಕೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ರೇಪೋ ದರ ಏರಿಕೆ: ದುಬಾರಿಯಾದ ಸಾಲ
ಹಣದುಬ್ಬರ ಮಂದಗೊಳ್ಳಲಿದೆ:ಆರ್ಥಿಕ ತಜ್ಞರು
8 ಯೂರಿಯಾ ಕೇಂದ್ರ ಮರುಸ್ಥಾಪನೆ: ಪಾಸ್ವಾನ್
ರೂಪಾಯಿ ಮೌಲ್ಯ ವರ್ಧನೆ
ಬಾರತದ ಅಭಿವೃದ್ಧಿ ಕುಂಠಿತಗೊಳ್ಳಲಿದೆ: ವಿಶ್ವಬ್ಯಾಂಕ್
ವಿಮಾನ ಸಂಸ್ಥೆಗಳಿಗೆ 1.5 ಬಿಲಿಯನ್ ನಷ್ಟ