ಉತ್ಪಾದನಾ ಕ್ಷೇತ್ರದಲ್ಲಿನ ಹಿನ್ನಡೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ತಿಂಗಳಲ್ಲಿ ಕೈಗಾರಿಕಾ ಉದ್ಯಮದ ಅಭಿವೃದ್ಧಿ ದರದಲ್ಲಿ ಶೇ.ಏಳರಷ್ಟು ಕುಸಿತ ಉಂಟಾಗಿದೆ.
ಕಳೆದ ಹಣಕಾಸು ವರ್ಷಕ್ಕಿಂತ ಪ್ರಸಕ್ತ ಹಣಕಾಸು ವರ್ಷದ ಮೊದಲನೇ ಮಾಸದಲ್ಲಿ ಕೈಗಾರಿಕ ಉತ್ಪನ್ನದಲ್ಲಿ ಶೇ.11.3ರಷ್ಟು ಇಳಿಕೆ ಉಂಟಾಗಿದೆ ಎಂದು ಕೈಗಾರಿಕಾ ಉತ್ಪನ್ನ ವರದಿಗಳು(ಐಐಪಿ) ತಿಳಿಸಿವೆ.
ಉತ್ಪಾದನಾ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಮಂದ ಪ್ರವೃತ್ತಿಯು ಈ ಇಳಿಮುಖಕ್ಕೆ ಮುಖ್ಯ ಕಾರಣವಾಗಿದ್ದು, ಈ ಅವಧಿಯಲ್ಲಿ ಉತ್ಪಾದನಾ ಕ್ಷೇತ್ರದ ಅಭಿವೃದ್ಧಿ ದರದಲ್ಲಿ ಶೇ.7.5ರಷ್ಟು ಇಳಿಕೆ ಉಂಟಾದರೆ ವಿದ್ಯುತ್ ನಿರ್ಮಾಣ ಕ್ಷೇತ್ರವು ತೀವ್ರ ಪ್ರಮಾಣದಲ್ಲಿ ಕುಂಠಿತಗೊಂಡಿದೆ.
ಏನೇ ಆದರೂ ಪ್ರಸಕ್ತ ಅವಧಿಯಲ್ಲಿ ಗಣಿಗಾರಿಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಉಂಟಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.2.6ರಷ್ಟಿದ್ದ ಅಭಿವೃದ್ಧಿ ದರವು ಏಪ್ರಿಲ್ ತಿಂಗಳಲ್ಲಿ ಶೇ.8.6ಕ್ಕೆ ಏರಿದೆ.
|