ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ ಲಭ್ಯತೆ, ಬೆಲೆ ನಿಯಂತ್ರಣ: ಕೇಂದ್ರ ಕ್ರಮ  Search similar articles
ಕೆಲವು ವಿಧದ ರಸಗೊಬ್ಬರಗಳ ಬೆಲೆಯನ್ನು ಪ್ರತಿ ಮೆಟ್ರಿಕ್ ಟನ್‌ಗೆ ರೂ.1,416ಕ್ಕೆ ಇಳಿಸಲು ಸಹಾಯವಾಗುವ ನಿಟ್ಟಿನಲ್ಲಿ ಸರಕಾರವು ನೂತನ ದರನೀತಿಗೆ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.

ರಾಜ್ಯ ಬೆಲೆ ಆಧಾರದಲ್ಲಿ ಭಾರತೀಯ ರಸಗೊಬ್ಬರ ಸಂಸ್ಥೆಗಳು ರಸಗೊಬ್ಬರವನ್ನು ಮಾರಾಟಮಾಡುತ್ತಿದ್ದು, ಕೆಲವು ಸಂದರ್ಭದಲ್ಲಿ ಬೆಲೆಯಲ್ಲಿ ಉಂಟಾಗುವ ಇಳಿಕೆಯ ನಷ್ಟ ಹೊಂದಿಸುವ ನಿಟ್ಟಿನಲ್ಲಿ ಸರಕಾರದಿಂದ ಬೆಂಬಲ ಬೆಲೆ ಪಡೆಯುತ್ತಿವೆ.

ಸರಕಾರದ ಈ ನೂತನ ದರ ನೀತಿಯು ಬೆಲೆ ಇಳಿಕೆಯ ಗುರಿಯನ್ನು ಹೊಂದುವುದರೊಂದಿಗೆ ರೈತರಿಗೆ ಸಾಕಷ್ಟು ರಸಗೊಬ್ಬರ ಪೂರೈಸುವ ಉದ್ದೇಶವನ್ನೂ ಹೊಂದಿದೆ.

ಈ ಹೊಸ ದರ ನೀತಿಯ ಅನ್ವಯ, ಸಂಯುಕ್ತ ರಸಗೊಬ್ಬರಗಳ ಬೆಲೆಯಲ್ಲಿ ಗಣನೀಯ ಇಳಿಕೆ ಉಂಟಾಗಲಿದೆ. ಪ್ರತಿ ಮೆಟ್ರಿಕ್‌ ಟನ್‌ಗೆ ಸರಾಸರಿ ರೂ.1,416 ರಷ್ಟು ಬೆಲೆಯು ಇಳಿಕೆಗೊಳ್ಳಲಿದೆ. ಅಲ್ಲದೆ, ರೈತರು ಕೆಲವು ವಿಧದ ರಸಗೊಬ್ಬರವನ್ನೇ ಅವಲಂಬಿಸುವುದು ಕಡಿಮೆಯಾಗುತ್ತದೆ ಎಂದು ಚಿದಂಬರಂ ಹೇಳಿದ್ದಾರೆ.

ಆದರೆ, ಇತರ ರಸಗೊಬ್ಬರಗಳಾದ ಯೂರಿಯಾದ ಬೆಲೆಯಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಂಪುಟದಿಂದ ಅನುಮೋದಿಸಲ್ಪಟ್ಟ ನೂತನ ನೀತಿಯು ಎಲ್ಲಾ ರಸಗೊಬ್ಬರಗಳಿಗೆ ಏಕರೂಪ ಬೆಂಬಲ ಬೆಲೆ ನೀಡಲಿದೆ ಎಂದು ಚಿದಂಬರಂ ತಿಳಿಸಿದ್ದಾರೆ.
ಮತ್ತಷ್ಟು
ಕೈಗಾರಿಕಾ ಅಭಿವೃದ್ಧಿಯಲ್ಲಿ ಕುಸಿತ
4 ಪೈಸೆಯಷ್ಟು ಏರಿದ ರೂಪಾಯಿ ಮೌಲ್ಯ
ರೇಪೋ ದರ ಏರಿಕೆ: ದುಬಾರಿಯಾದ ಸಾಲ
ಹಣದುಬ್ಬರ ಮಂದಗೊಳ್ಳಲಿದೆ:ಆರ್ಥಿಕ ತಜ್ಞರು
8 ಯೂರಿಯಾ ಕೇಂದ್ರ ಮರುಸ್ಥಾಪನೆ: ಪಾಸ್ವಾನ್
ರೂಪಾಯಿ ಮೌಲ್ಯ ವರ್ಧನೆ