ಸುಮಾರು ಶೇ.50ಕ್ಕೂ ಹೆಚ್ಚು ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುವ ಮೂಲಕ ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಏಕೈಕ ಅತಿ ದೊಡ್ಡ ಅನಿಲ ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಲು ಸಿದ್ಧಗೊಂಡಿದೆ.
ಕೆಜಿ-ಡಿ6 ಮತ್ತು ಇತರ ತೈಲ ಕ್ಷೇತ್ರಗಳಲ್ಲಿನ ಅನಿಲ ಉತ್ಪಾದನೆಯು ಶೇ.50ರಷ್ಟು ಮಾರುಕಟ್ಟೆ ಪಾಲನ್ನು ಪಡೆದು ದೇಶದಲ್ಲೇ ಅತಿ ದೊಡ್ಡ ಅನಿಲ ಉತ್ಪಾದನಾ ಸಂಸ್ಥೆ ಎಂಬ ಹಿರಿಮೆಗೇರಿಸುತ್ತದೆ ಎಂದು ಕಂಪನಿ ಆಡಳಿತ ನಿರ್ದೇಶಕ ಮುಖೇಶ್ ಅಂಬಾನಿ ಮುಂಬಯಿನಲ್ಲಿ ತಿಳಿಸಿದ್ದಾರೆ.
ಕೆಜಿ-ಡಿ6 ಅಭಿವೃದ್ಧಿಯ ಜೊತೆಯಲ್ಲಿಯೇ, ವಿವಿಧ ತೈಲ ಕ್ಷೇತ್ರಗಳ ಅಭಿವೃದ್ಧಿ ಮತ್ತು ತೈಲಾನ್ವೇಷಣಾ ಪ್ರಕ್ರಿಯೆನ್ನು ಮುಂದುವರಿಸಲಿದೆ ಎಂದು ಮುಖೇಶ್ ಹೇಳಿದ್ದಾರೆ.
ತೈಲ ಬೆಲೆ ಏರಿಕೆ ಪರಿಸ್ಥಿತಿ ಮತ್ತು ಕೌಶಲ್ಯಯುತ ಶುದ್ಧೀಕರಣ ವಿಧಾನವು ಕೂಡಾ ಕಂಪನಿಗೆ ಪ್ರಯೋಜನವನ್ನು ಉಂಟುಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಹಣಕಾಸು ವರ್ಷದಲ್ಲಿ ನೂತನ ಶುದ್ಧೀಕರಣ ಕೇಂದ್ರವನ್ನು ಸ್ಥಾಪಿಸುವ ಮೂಲಕ ಈಗಾಗಲೇ ಇಕುವ ಜಾಮ್ನಗರ್ ಶುದ್ಧೀಕರಣ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಗೊಳಿಸಲಿದೆ.
ಕಂಪನಿಯ ನೂತನ ತೈಲ ಶುದ್ಧೀಕರಣ ಕೇಂದ್ರವು 2009ನೇ ಹಣಕಾಸು ವರ್ಷದಲ್ಲಿ ಕಾರ್ಯರೂಪಗೊಳ್ಳಲಿದ್ದು, ಇದು ರಿಲಾಯನ್ಸ್‌ನ ಕಚ್ಛಾ ತೈಲ ಪ್ರಕ್ರಿಯೆಯನ್ನು 0.66ರಿಂದ 1.24 ಮಿಲಿಯನ್ ಬ್ಯಾರಲ್‌ಗೆ ಹೆಚ್ಚಿಸಲಿದೆ ಇದು. ಜಾಗತಿಕ ಸಾಮರ್ಥ್ಯದ ಶೇ.ಎರಡಕ್ಕೆ ಸಮವಾಗಿದೆ ಎಂದು ಅಂಬಾನಿ ಸ್ಪಷ್ಟಪಡಿಸಿದ್ದಾರೆ.
|