ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಬ್ಬರಿಸಿದ ಹಣದುಬ್ಬರ: ಶೇ.8.75ಕ್ಕೆ ಏರಿಕೆ  Search similar articles
PTI
ದುಬಾರಿಯಾದ ಆಹಾರ ಉತ್ಪನ್ನ ಮತ್ತು ತರಕಾರಿ ಬೆಲೆಗಳ ಏರಿಕೆಯ ಕಾರಣದಿಂದಾಗಿ ಮೇ 31ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರ ಪ್ರಮಾಣವು ಶೇ.8.75ಕ್ಕೆ ವರ್ಧನೆಗೊಂಡಿದ್ದು, ಹಣದುಬ್ಬರ ನಿಯಂತ್ರಣಕ್ಕಾಗಿ ಯುಪಿಎ ಸರಕಾರವು ಕೈಗೊಂಡ ಕ್ರಮಗಳೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಈ ತಿಂಗಳ ಪ್ರಾರಂಭದಲ್ಲಿ ಉಂಟಾದ ಇಂಧನ ಬೆಲೆ ಏರಿಕೆಯನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಹಣದುಬ್ಬರವು ಶೇ.9ಕ್ಕೆ ವರ್ಧನೆಗೊಳ್ಳುವ ನಿರೀಕ್ಷೆ ಇದೆ.

ಈ ಅವಧಿಯಲ್ಲಿ ಆಹಾರ ಉತ್ಪನ್ನ, ತರಕಾರಿ, ಹಾಲು, ಸಾಂಬಾರ ಪದಾರ್ಥ ಮತ್ತು ಕೆಲವು ಉತ್ಪಾದಕ ವಸ್ತುಗಳ ಬೆಲೆಯಲ್ಲಿನ ಏರಿಕೆಯು ಹಣದುಬ್ಬರವನ್ನು ಏಳು ವರ್ಷಗಳಲ್ಲೇ ಅಧಿಕ ಮಟ್ಟಕ್ಕೆ ಹೆಚ್ಚಿಸಿದೆ.

ಸಿಮೆಂಟ್ ಬೆಲೆ ನಿಯಂತ್ರಣಕ್ಕಾಗಿ ಸರಕಾರವು ಕ್ರಮ ಕೈಗೊಂಡಿದ್ದರೂ, ಸಿಮೆಂಟ್ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ ಉಂಟಾಗಿದ್ದು, ಇದು ಹಣದುಬ್ಬರ ಬೆಂಕಿಗೆ ತುಪ್ಪ ಸುರಿದಿದೆ.

ರೇಪೋ ದರವನ್ನು ಶೇ.0.25ರಷ್ಟು ಕಡಿಮೆಗೊಳಿಸುವುದರೊಂದಿಗೆ, ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಣಕ್ಕಾಗಿ ಅನೇಕ ಹಣಕಾಸು ಕ್ರಮಗಳನ್ನು ಕೈಗೊಂಡಿತ್ತು.
ಮತ್ತಷ್ಟು
ಬೃಹತ್ ಅನಿಲ ಉತ್ಪಾದನಾ ಸಂಸ್ಥೆಯಾಗಿ ರಿಲಾಯನ್ಸ್
ರಸಗೊಬ್ಬರ ಲಭ್ಯತೆ, ಬೆಲೆ ನಿಯಂತ್ರಣ: ಕೇಂದ್ರ ಕ್ರಮ
ಕೈಗಾರಿಕಾ ಅಭಿವೃದ್ಧಿಯಲ್ಲಿ ಕುಸಿತ
4 ಪೈಸೆಯಷ್ಟು ಏರಿದ ರೂಪಾಯಿ ಮೌಲ್ಯ
ರೇಪೋ ದರ ಏರಿಕೆ: ದುಬಾರಿಯಾದ ಸಾಲ
ಹಣದುಬ್ಬರ ಮಂದಗೊಳ್ಳಲಿದೆ:ಆರ್ಥಿಕ ತಜ್ಞರು