ಗೂಗಲ್‌ನ ಜಾಹೀರಾತು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕುರಿತಾಗಿ ಸರ್ಚ್ ಇಂಜಿನ್ ದೈತ್ಯ ಗೂಗಲ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯಾಹೂ ಒಪ್ಪಿಗೆ ಸೂಚಿಸಿದೆ.
ಈ ಒಪ್ಪಂದದಡಿಯಲ್ಲಿ, ಅಮೆರಿಕ ಮತ್ತು ಕೆನಡಾದ ಯಾಹೂ ಶೋಧ ಫಲಿತಾಂಶಗಳ ಬದಿಯಲ್ಲಿ ಗೂಗಲ್ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ.
ಎಲ್ಲಾ ಇಂಟರ್ನೆಟ್ ಕಂಪನಿಗಳನ್ನು ಖರೀದಿ ಮಾಡುವ ಪ್ರಯತ್ನವನ್ನು ಪುನರಾರಂಭಿಸುವಂತೆ ಮೈಕ್ರೋಸಾಫ್ಟ್ ಕಂಪನಿಯ ಮನವೊಲಿಸಲು ಯಾಹೂ ವಿಫಲಗೊಂಡ ನಂತರ ಈ ಘೋಷಣೆಯನ್ನು ಯಾಹೂ ಹೊರಗೆಡವಿದೆ.
ಅಲ್ಲದೆ, ಕೇವಲ ತನ್ನ ಆನ್‌ಲೈನ್ ಶೋಧ ವ್ಯವಹಾರವನ್ನು ಖರೀದಿ ಮಾಡುವ ಕುರಿತಾದ ಮೈಕ್ರೋಸಾಫ್ಟ್‌ನ ಪ್ರಸ್ತಾಪವನ್ನು ಯಾಹೂ ತಿರಸ್ಕರಿಸಿದ ನಂತರ ಈ ನಿರ್ಧಾರವನ್ನು ಯಾಹೂ ಕೈಗೊಂಡಿದೆ.
ಗೂಗಲ್‌ನೊಂದಿಗೆ ನಡೆಸಿದ ಈ ಒಪ್ಪಂದದಿಂದಾಗಿ ಯಾಹೂಗೆ ಪ್ರತಿವರ್ಷ 800 ಮಿಲಿಯನ್ ಡಾಲರ್ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ ಎಂದು ಯಾಹೂ ಹೇಳಿದೆ.
ಇಂಟರ್ನೆಟ್ ದೈತ್ಯಗಳ ನಡುವಿನ ಈ ವಾಣಿಜ್ಯ ಒಪ್ಪಂದವು ತನ್ನ ಗ್ರಾಹಕರಿಗೆ ಸೂಕ್ತ ರೀತಿಯ ಜಾಹೀರಾತು ನೀಡಲು ಮತ್ತು ಜಾಹೀರಾತುದಾರರಿಗೆ ಮತ್ತು ಪ್ರಕಟಕರಿಗೆ ಉತ್ತಮ ಜಾಹೀರಾತು ತಂತ್ರಜ್ಞಾನ ಸೌಲಭ್ಯವನ್ನು ನೀಡಲಿದೆ ಎಂದು ಗೂಗಲ್ ತಿಳಿಸಿದೆ.
|