ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆವಶ್ಯ ವಸ್ತುಗಳ ಬೆಲೆ ಶೇ.22ರಷ್ಟು ಏರಿಕೆ  Search similar articles
ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.8.75ಕ್ಕೆ ಏರಿರುವುದರೊಂದಿಗೆ, ಆವಶ್ಯಕ ವಸ್ತುಗಳ ರಖಂ ಬೆಲೆಯು ಶೇ.22ರಷ್ಟು ಏರಿಕೆಗೊಂಡಿರುವುದಾಗಿ ನಾಲ್ಕು ಮಹಾನಗರಗಳ ಗ್ರಾಹಕರು ಅಭಿಪ್ರಾಯಪಡುತ್ತಾರೆ.

ಪ್ರಸಕ್ತ ವರ್ಷದ ಐದು ತಿಂಗಳುಗಳಲ್ಲಿ ನಾಲ್ಕು ಮಹಾನಗರಗಳಲ್ಲಿ ಸಾಸಿವೆ ಎಣ್ಣೆ ಬೆಲೆಯು ಶೇ.10-21ರಷ್ಟು ಏರಿಕೆಗೊಂಡರೆ, ಗೋಧಿಹಿಟ್ಟಿನ ಬೆಲೆಯು ಶೇ22ರಷ್ಟು ಹೆಚ್ಚಳಗೊಂಡಿದೆ ಎಂದು ಗ್ರಾಹಕ ವ್ಯವಹಾರ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಕೆಲವು ಮೆಟ್ರೋ ನಗರಗಳಲ್ಲಿ ಗೋಧಿ, ಅಕ್ಕಿ, ಬೇಳೆಕಾಳು ಮತ್ತು ಸಕ್ಕರೆ ಬೆಲೆಯು ಕೂಡಾ ವರ್ಧನೆಗೊಂಡಿದ್ದರೂ, ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ನೀರುಳ್ಳಿ ಮತ್ತು ಬಟಾಟೆ ಅಗ್ಗವಾಗಿದೆ.

ಕೋಲ್ಕತ್ತಾದಲ್ಲಿ ಜನವರಿ ತಿಂಗಳಲ್ಲಿ ಪ್ರತಿ ಲೀಟರ್‌ಗೆ ರೂ.62ರಷ್ಟಿದ್ದ ಸಾಸಿವೆ ಎಣ್ಣೆ ಬೆಲೆಯು ಮೇ ತಿಂಗಳಲ್ಲಿ ರೂ.75ಕ್ಕೆ ಏರಿದೆ. ಅದೇ ರೀತಿ, ಮುಂಬಯಿಯಲ್ಲಿ ಶೇ.10, ದೆಹಲಿಯಲ್ಲಿ ಶೇ.12ರಷ್ಟು ಬೆಲೆಯು ಏರಿಕೆಗೊಂಡಿದೆ.

ಗೋಧಿಹಿಟ್ಟು ಚೆನ್ನೈನಲ್ಲಿ ತುಟ್ಟಿಯಾಗಿ ಪರಿಣಮಿಸಿದ್ದು, ಜನವರಿ ತಿಂಗಳಿಗಿಂತ ಪ್ರತಿ ಕೆಜಿಗೆ ರೂ.ನಾಲ್ಕರಷ್ಟು ಹೆಚ್ಚಳಗೊಂಡಿದೆ. ಇತರ ಮೆಟ್ರೋಗಳಲ್ಲಿ ಗೋಧಿಹಿಟ್ಟಿನ ಬೆಲೆಯು ಶೇ.6-8ರಷ್ಟು ಏರಿಕೆಗೊಂಡಿದೆ.ಅದೇ ರೀತಿ, ಅಕ್ಕಿಯ ಬೆಲೆಯು ದೆಹಲಿಯಲ್ಲಿ ಶೇ.12ರಷ್ಟು ಏರಿದರೆ, ಮುಂಬಯಿನಲ್ಲಿ ಶೇ.5ರಷ್ಟು ಏರಿಕೆಗೊಂಡಿದೆ.
ಮತ್ತಷ್ಟು
ಉತ್ತಮ ಮಳೆಯಿಂದ ಹಣದುಬ್ಬರ ಹತೋಟಿ:ಅಹ್ಲುವಾಲಿಯಾ
ಪಾಕಿಸ್ತಾನದಿಂದ ಸಿಮೆಂಟ್ ಆಮದಿಗೆ ಚಿಂತನೆ
ಜಾಹೀರಾತು ಒಪ್ಪಂದಕ್ಕೆ ಯಾಹೂ ಗೂಗಲ್ ಒಪ್ಪಿಗೆ
ಉಬ್ಬರಿಸಿದ ಹಣದುಬ್ಬರ: ಶೇ.8.75ಕ್ಕೆ ಏರಿಕೆ
ಬೃಹತ್ ಅನಿಲ ಉತ್ಪಾದನಾ ಸಂಸ್ಥೆಯಾಗಿ ರಿಲಾಯನ್ಸ್
ರಸಗೊಬ್ಬರ ಲಭ್ಯತೆ, ಬೆಲೆ ನಿಯಂತ್ರಣ: ಕೇಂದ್ರ ಕ್ರಮ