ದಕ್ಷಿಣ ಆಫ್ರಿಕಾದ ಟೆಲಿಕಾಂ ಸಂಸ್ಥೆ ಎಂಟಿಎನ್‌ನನ್ನು ಸ್ವಾಧೀನಪಡಿಸುವ ಪ್ರಕ್ರಿಯೆಗೆ ಅನಿಲ್ ಧೀರೂಬಾಯ್ ಸಮೂಹವು ಅಡ್ಡಿಪಡಿಸುತ್ತಿದೆ ಎಂದು ಮುಖೇಶ್ ಸಮೂಹದ ರಿಲಾಯನ್ಸ್ ಇಂಡಸ್ಟ್ರೀಸ್ ಸಮೂಹವು ಆರೋಪಿಸುವ ಮೂಲಕ ಅಂಬಾನಿ ಕುಟುಂಬದಲ್ಲಿನ ವಿವಾದವು ಮತ್ತೊಮ್ಮೆ ಹೊರಬಿದ್ದಿದೆ.
ಜಗತ್ತಿನ ಎರಡು ಮೌಲ್ಯಯುತ ಟೆಲಿಕಾಂ ಸಂಸ್ಥೆಗಳ ಸಂಯೋಜನೆಗೆ ಅಡಿಡಪಡಿಸುತ್ತಿದೆ ಎಂಬ ಆರೋಪದ ಬಗ್ಗೆ ಮುಖೇಶ್ ಅಂಬಾನಿ ಸಮೂಹದ ವಕ್ತಾರರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ರಿಲಯನ್ಸ್ ಕಮ್ಯುನಿಕೇಶನ್ಸ್‌ನಲ್ಲಿರುವ ನಿಯಂತ್ರಕ ಶೇರುಗಳ ಖರೀದಿಗೆ ಮೊದಲ ನಿರಾಕರಣೆಯ ಹಕ್ಕು ಇದೆ ಎಂಬ ಸುಳ್ಳು ಮಾಹಿತಿಯನ್ನು ಎಂಟಿಎನ್ ಬಳಗಕ್ಕೆ ಆರ್ಐಎಲ್ ನೀಡಿದೆ ಎಂದು ಅನಿಲ್ ಬಳಗದ ವಕ್ತಾರ ತಿಳಿಸಿದ್ದಾರೆ.
ಎಂಟಿಎನ್ ಸಮೂಹದೊಂದಿಗಿನ ಸ್ವಾಧೀನ ಕುರಿತಾದ ಮಾತುಕತೆಯು ಸರಿಯಾಗಿಯೇ ನಡೆಯುತ್ತಿದ್ದು, ಮುಖೇಶ್ ಅಂಬಾನಿ ಅವರ ಈ ಆರೋಪ ಪ್ರಕ್ರಿಯೆಯು ಹತಾಶೆ ತರುವ ವಿಷಯವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
|