ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕು ಲಕ್ಷ ನೇರ ತೆರಿಗೆಯನ್ನು ಸಂಗ್ರಹಿಸುವ ವಿಶ್ವಾಸವನ್ನು ಹಣಕಾಸು ಸಚಿವ ಚಿಂದಬರಂ ಅವರು ಹೊಂದಿರುವುದರೊಂದಿಗೆ, ಗುರಿಯನ್ನು ತಲುಪುವ ನಿಟ್ಟಿನಲ್ಲಿ ತೆರಿಗೆಯಿಂದ ತಪ್ಪಿಸಿಕೊಳ್ಳುವವರ ಮೇಲೆ ದಾಳಿ ನಡೆಸುವುದರ ಜೊತೆಗೆ ಅನೇಕ ಸಮೀಕ್ಷೆಗಳನ್ನೂ ನಡೆಸಲು ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ.
ತೆರಿಗೆ ವಿವರಗಳನ್ನು ನೀಡದೇ ಇರುವಂತಹ ಪ್ರಕರಣಗಳನ್ನು ಮತ್ತು ತೆರಿಗೆ ವಿವರಗಳನ್ನು ನೀಡುವುದನ್ನು ನಿಲ್ಲಿಸಿದಂತಹ 15 ನಾನ್ ಫೈಲರ್ ಹಾಗೂ ಸ್ಟಾಪ್ ಫೈಲರ್ ಪ್ರಕರಣಗಳು ಈಗಾಗಲೇ ದಾಖಲಾಗಿವೆ ಎಂದು ಜೂನ್ ಒಂಬತ್ತರಂದು ಮುಖ್ಯ ಆಯೋಗಾಧಿಕಾರಿ ಹಾಗೂ ಆದಾಯ ತೆರಿಗೆಯ ಪ್ರಧಾನ ನಿರ್ದೇಶಕರ ಸಮಾವೇಶವನ್ನು ಉದ್ಘಾಟಿಸುವ ಸಂದರ್ಭದಲ್ಲಿ ಹೇಳಿದ್ದಾರೆ.
ತೆರಿಗೆ ಕಳ್ಳರ ಕುರಿತಾಗಿ ತೀಕ್ಷ್ಣ ಕ್ರಮ ಕೈಗೊಳ್ಳುವ ಸುಳಿವು ನೀಡಿರುವ ಚಿದಂಬರಂ, ಸರ್ವೇಯ ಸಂದರ್ಭದಲ್ಲಿ ನಾನ್ ಫೈಲರ್ ಅಥವಾ ಸ್ಟಾಪ್ ಫೈಲರ್ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತೆರಿಗೆ ಸಂಗ್ರಹದಾರರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಆದಾಯ ತೆರಿಗೆ ಕಾಯಿದೆಯ ಪ್ರಕಾರ, ತೆರಿಗೆ ಸಲ್ಲಿಸಲು ವಿಫಲವಾದ ವ್ಯಕ್ತಿಯು ಒಂದು ಲಕ್ಷಕ್ಕಿಂತಲೂ ತೆರಿಗೆಯನ್ನು ಸಲ್ಲಿಸಿಲ್ಲ ಎಂಬುದು ಕಂಡುಬಂದಲ್ಲಿ ಏಳು ವರ್ಷದ ಅವಧಿಯವರೆಗೆ ಕಾರಾಗೃಹ ಶಿಕ್ಷೆಗೆ ಒಳಪಡುತ್ತಾನೆ ಮತ್ತು 50000 ರೂ.ದಂಡಕ್ಕೊಳಪಡುತ್ತಾನೆ.
ತೆರಿಗೆ ಪಾವತಿ ಕಡ್ಡಾಯದ ಕುರಿತಾಗಿ ಕಾಯಿದೆ ಇದ್ದರೂ,ಸರಕಾರದ ಈ ಉದ್ದೇಶವು ಪುನರುಚ್ಛಾರವು ಕಳ್ಳರನ್ನು ಪತ್ತೆಹಚ್ಚುವ ಉದ್ದೇಶವನ್ನು ಹೊಂದಿದೆ.
|