ಜಪಾನಿನ ಕಂಪನಿ ಜೀನ್‌ಪ್ಯಾಕ್ಸ್ ನೂತನ ಕಾರೊಂದನ್ನು ಅನಾವರಣಗೊಳಿಸಿದ್ದು, ಈ ಕಾರು ಓಡಲು ಪೆಟ್ರೋಲಿನ ಆವಶ್ಯಕತೆಯಿಲ್ಲ. ಕೇವಲ ನೀರಿದ್ದರೆ ಸಾಕು. ನದಿನೀರು, ಮಳೆನೀರು , ಸಮುದ್ರದ ನೀರು ಅಥವಾ ಯಾವುದೇ ಜಪಾನಿನ ಚಹಾವನ್ನು ಇದಕ್ಕೆ ಬಳಸಬಹುದು. ವಿದ್ಯುತ್ ಚಾಲಿತ ಕಾರಾದ ಇದು ಹೈಡ್ರೋಜನ್ ಡೈ ಆಕ್ಸೈಡ್ ನಿಂದ ನಿಧಾನವಾಗಿ ಓಡುತ್ತದೆ.
ಈ ಕಾರಿನ ವಿಶೇಷಗುಣವೆಂದರೆ ಇದಕ್ಕೆ ಬಾಹ್ಯ ಇಂಧನದ ಅವಶ್ಯಕತೆಯಿಲ್ಲ. ಸಮಯಕ್ಕೆ ಸರಿಯಾಗಿ ತುಂಬಲು ನಿಮ್ಮ ಬಳಿಯಲ್ಲಿ ಸಾಕಷ್ಟು ನೀರಿನ ಬಾಟಲ್‌ಗಳಿದ್ದರೆ ಅಷ್ಟೇ ಸಾಕು ಎಂದು ಗೆನ್‌ಪ್ಯಾಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿಯೋಶಿ ಹಿರಾಸವಾ ಹೇಳುತ್ತಾರೆ.
ಕಾರಿನ ಹಿಂಭಾದಲ್ಲಿರುವ ನೀರಿನ ತೊಟ್ಟಿಯಲ್ಲಿ ನೀರು ಸುರಿದ ನಂತರ ನೂತನವಾಗಿ ಸಂಶೋಧಿಸಲ್ಪಟ್ಟ ಇಂಧನ ಜನರೇಟರ್ ನೀರಿನಿಂದ ಹೈಡ್ರೋಜನ್ ಡೈ ಆಕ್ಸೈಡನ್ನು ತೆಗೆದುಕೊಂಡು ಎಲೆಕ್ಟ್ರಾನ್‌ಗಳನ್ನು ಬಿಡುಗಡೆ ಮಾಡುತ್ತದೆ. ಅಂತಿಮವಾಗಿ ವಿದ್ಯುತ್ ಶಕ್ತಿಯನ್ನು ಉತ್ಪಾದನೆ ಮಾಡುತ್ತದೆ.
ವಿದ್ಯುತ್ ಚಾಲಿತ ಕಾರುಗಳಲ್ಲಿ ಬಳಸುವ ರೀತಿಯಲ್ಲಿ ಬ್ಯಾಟರಿಗಳಿಗೆ ರೀಚಾರ್ಜ್‌ಗಳಿಗೆ ಮೂಲಸೌಕರ್ಯವನ್ನು ಹೆಚ್ಚಿಸುವ ಆವಶ್ಯಕತೆಯಿರುವುದಿಲ್ಲ ಆದುದರಿಂದ ಈ ನೂತನ ವಿಧಾನವನ್ನು ಶಿಫಾರಸು ಮಾಡುತ್ತಿದ್ದೇವೆ ಎಂದು ಮುಂಬರು ಜಪಾನ್ ಜಿ8 ಸಮಾವೇಶದಲ್ಲಿ ಈ ಕಾರನ್ನು ಜಾಹೀರಾತುಗೊಳಿಸುವ ನಿರೀಕ್ಷೆಯನ್ನು ಹೊಂದಿರುವ ಹಿರಾಸಾವಾ ತಿಳಿಸಿದ್ದಾರೆ.
ಕಂಪನಿಯ ಪ್ರಕಾರ, ಒಂದು ಲೀಟರ್ ನೀರಿನಿಂದ ಈ ಕಾರು 80 ಕಿಲೋ ಮೀಟರ್ ಅಥವಾ 50 ಮೈಲುಗಳೊಂದಿಗೆ ಒಂದು ಗಂಟೆ ಓಡುವ ಸಾಮರ್ಥ್ಯವನ್ನು ಹೊಂದಿದೆ.
ಈ ಕಾರನ್ನು ಸಮೂಹ ನಿರ್ಮಾಣ ಮಾಡುವಲ್ಲಿ ಜಪಾನಿನ ಆಟೋಮೊಬೈಲ್ ನಿರ್ಮಾಪಕರೊಂದಿಗೆ ಸಹಬಾಗಿತ್ವ ಹೊಂದುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಪೇಟೆಂಟ್‌ಗಾಗಿ ಮನವಿ ಸಲ್ಲಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಜಾಗತಿಕವಾಗಿ ಇಂಧನ ಬೆಲೆಯು ಏರುತ್ತಿರುವುದರೊಂದಿಗೆ ಜನರು ಇದಕ್ಕಾಗಿ ಕೆಲವು ಪರ್ಯಾಯ ವ್ಯವಸ್ಥೆಯನ್ನು ನಿರೀಕ್ಷಿಸುತ್ತಿದ್ದು, ಈ ನಿಟ್ಟಿನಲ್ಲಿ ಪರ್ಯಾಯದೊಂದಿಗೆ ಕಂಪನಿಯು ಜಾಗತಿಕವಾಗಿ ಮೇಲೆ ಬರಲು ಪ್ರಯತ್ನಿಸುತ್ತಿದೆ.
|